
ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಮ್ಮ ವಿದ್ಯಾರ್ಥಿ ಗಾಯಗೊಂಡ ಘಟನೆ ಲಾಯಿಲ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಮಂಗಳೂರಿನ ಶ್ರೀನಿವಾಸ ಕಾಲೇಜಿನ ನಾಲ್ಕು ಮಂದಿ ವಿದ್ಯಾರ್ಥಿಗಳ ತಂಡ ಎರಡು ಬೈಕ್ ಗಳಲ್ಲಿ ಕೊಟ್ಟಿಗೆಹಾರ ಸಮೀಪದ ದೇವರಮನೆಗೆ ಹೋಗಿದ್ದು ಅಲ್ಲಿಂದ ಸಂಜೆ ಹಿಂತಿರುಗುತಿದ್ದ ವೇಳೆ ಲಾಯಿಲ ಬಳಿ ಹೆದ್ದಾರಿಯಲ್ಲಿ ದ್ದ ಹೊಂಡಕ್ಕೆ ಕೇಶವನ್ ಎಂಬ ವಿದ್ಯಾರ್ಥಿ ಚಲಾಯಿಸುತಿದ್ದ ಬೈಕ್ ಬಿದ್ದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬೈಕಿನ ಹಿಂಬದಿ ಸವಾರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಮಂಗಳೂರು ನಿವಾಸಿ ಧೀರಜ್ (23) ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ಕಪ್ಪಿದ್ದು ,ಸವಾರ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿದ್ದ ಗುಂಡಿಗೆ ಬಿದ್ದು, ಬೈಕ್ ಪಲ್ಟಿಯಾದ ವೇಳೆ ಟ್ಯಾಂಕರೊಂದರ ಟಯರ್ ಧೀರಜ್ ತಲೆ ಮೇಲೆ ಹಾದು ಹೋಗಿರುವುದರಿಂದ ಹೆಲ್ಮೆಟ್ ಪುಡಿಯಾಗಿ ತಲೆ ಛಿದ್ರಗೊಂಡು ಸಾವನ್ನಪ್ಪಿರುವ ಬಗ್ಗೆ ಸಹ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ರಸ್ತೆಯ ಅವ್ಯವಸ್ಥೆಯೇ ದುರಂತಕ್ಕೆ ಕಾರಣ,
ಅದಲ್ಲದೇ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೂ ಈ ಅವಘಡಕ್ಕೆ ಕಾರಣ ಸರಿಯಾದ ಸೂಚನಾ ಫಲಕಗಳು , ರಿಪ್ಲೆಕ್ಟರ್, ಎಚ್ಚರಿಕೆ ಫಲಕ, ಅಳವಡಿಸದೇ ಇರುವುದರಿಂದ ಹಾಗೂ , ಅಲ್ಲಲ್ಲಿ ರಸ್ತೆಯಲ್ಲಿ ಹೊಂಡ ಬಿದ್ದಿರುವುದು ಈ ಹೊಂಡದಲ್ಲಿ ಮಳೆ ನೀರು ನಿಂತಿರುವುದು ಕೂಡ ಇಂತಹ ಘಟನೆಗಳಿಗೆ ಕಾರಣ ಎಂಬ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.