ವಿದ್ಯಾರ್ಥಿಗಳು ಉಜ್ವಲ ಭಾರತವನ್ನು ಮುನ್ನಡೆಸುವ ಪ್ರತಿನಿಧಿಗಳು ,ಶಾಸಕ ಹರೀಶ್ ಪೂಂಜ : ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಗೌರವ:

 

ಬೆಳ್ತಂಗಡಿ: ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಉಜ್ವಲ ಭವ್ಯ ಭಾರತವನ್ನು ಮುನ್ನಡೆಸುವ ಪ್ರತಿನಿಧಿಗಳು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು ಅವರು ಭಾನುವಾರ ಉಜಿರೆ,ಲಾಯಿಲ ಮತ್ತು ಅಳದಂಗಡಿಯಲ್ಲಿ
ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ
ಎಸ್. ಎಸ್. ಎಲ್. ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದರು. ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಈ ಗೌರವ ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು.ವಿದ್ಯಾರ್ಥಿಗಳು,ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ,ಪೋಷಕರ ಆಶಯಕ್ಕೆ ಪೂರಕವಾಗಿ ಜೀವನ ನಡೆಸಿ.ಎಐ ಯುಗದಲ್ಲಿ ಸ್ಪರ್ಧೆ ಮಾಡುವ ಮನೋಭಾವನೆ ಮೂಲಕ ಮುಂದುವರಿಯಿರಿ,ಶಿಸ್ತುಬದ್ಧ ಜೀವನ ಸಂಕಲ್ಪ ರೂಢಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ಸಂಚಾಲಕ ಕೆ. ಮೋಹನ್ ಕುಮಾರ್ ಮಾತನಾಡಿ, ವಿದ್ಯೆಯ ಜೊತೆಗೆ ಶಿಸ್ತು ಸಂಸ್ಕಾರ ಅಗತ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದರು.
ಸೇಕ್ರೇಟ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ.ಎಂ. ಎನ್. ಜೋಸೆಫ್ ಮಾತನಾಡಿ, ಎಲ್ಲರಿಗೂ ಯಶಸ್ಸಿನ ತುದಿಯನ್ನು ಏರುವುದಕ್ಕೆ ಅಸಾಧ್ಯ. ಆದರೆ ಅದಕ್ಕೆ ಇಂತಹ ಕಾರ್ಯಕ್ರಮ ಪ್ರೇರಣೆಯಾಗಿದೆ. ತಾಲೂಕು ಇಂದು ಪ್ರಗತಿ ಹೊಂದುತ್ತಿರುವುದಕ್ಕೆ ಶಾಸಕ ಹರೀಶ್ ಪೂಂಜ ಕಾರಣಕರ್ತರಾಗಿದ್ದಾರೆ. ಮೂಲಭೂತ ಸೌಕರ್ಯಗಳ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ಶಾಸಕ ಹರೀಶ್ ಪೂಂಜ ಶ್ರಮಿಕ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ 1,500ಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

error: Content is protected !!