
ಬೆಳ್ತಂಗಡಿ:ಎಪಿಎಂಸಿ ಇಲಾಖೆಯ ( ಮೈಸೂರು ವಿಭಾಗೀಯ ಕಚೇರಿ-ಜಾರಿಕೋಶ) ಅಡಿಕೆ ವರ್ತಕರಿಗೆ ಅನಗತ್ಯ ನೋಟಿಸ್ ಮತ್ತು ವ್ಯವಹಾರ ಲೆಕ್ಕ ಪತ್ರ ಪರಿಶೀಲನೆ ನೆಪದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಅಡಿಕೆ ಮತ್ತು ಕೃಷಿ ಉತ್ಪನ್ನಗಳ ವರ್ತಕರ ಸಂಘದಿಂದ ಸಚಿವರಾದ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಸಚಿವರಾಗಿ ಆಯ್ಕೆಯಾದ ಯು.ಟಿ. ಖಾದರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ವರ್ತಕರ ಸಂಘದ ಪರವಾಗಿ ಅಭಿನಂದಿಸಲಾಯಿತು . ಈ ವೇಳೆ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸೇರಿದಂತೆ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು..ಜಿಲ್ಲೆಯ ವರ್ತಕರಿಗೆ ಇಲಾಖೆಯ ಅಧಿಕಾರಿಗಳಿಂದ ತೊಂದರೆ ಆಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು .