
ಬೆಳ್ತಂಗಡಿ: ಶನಿವಾರ ಸುರಿದ ಭಾರೀ ಮಳೆಯಿಂದ ಲಾಯಿಲ ಗ್ರಾಮದ ಪುತ್ರಬೈಲು ,ಗುರಿಂಗಾನ ಹೊಳೆ ಬದಿ , ಭಾಗಗಳ ಹಲವಾರು ಮನೆಗಳು ಜಲಾವೃತ್ತಗೊಂಡು ಆನೇಕ ಕುಟುಂಬಗಳನ್ನು ಪಂಚಾಯತ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಕೆಲವೊಂದು ಬಡ ಕುಟುಂಬಗಳ ಪಾತ್ರೆ ಆಹಾರ ಸಾಮಾಗ್ರಿಗಳು ಕೂಡ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಸಂಕಷ್ಟದಲ್ಲಿದ್ದ ಸುಮಾರು 15 ಕುಟುಂಬಗಳಿಗೆ ವಕೀಲ ಮಾಜಿ ಗ್ರಾ ಪಂ ಸದಸ್ಯ ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ದಾನಿಗಳಾದ ಕಾರ್ತಿಕ್ ಆಸೋಶಿಯೇಷನ್ ಮಾಲಕ ಕಾರ್ತಿಕ್ ಅವರ ವತಿಯಿಂದ ಆಹಾರ ಕಿಟ್ ಭಾನುವಾರ ವಿತರಿಸಲಾಯಿತು .ಈ ವೇಳೆ ಹರಿಪ್ರಸಾದ್ ಲಾಯಿಲ, ಉದಯ ಕೊಯ್ಯೂರು ಸಹಕರಿಸಿದರು