ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ,  ಮಂತ್ರಿಮಂಡಲ ರಚನೆ: ನಾಯಕಿಯಾಗಿ ಸಂಜನಾ ಎಸ್. ಉಪನಾಯಕಿಯಾಗಿ ಶ್ರುತಾ ಆಯ್ಕೆ:

 

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ಆಯ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮಾದರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳು ಮತಪತ್ರಗಳ ಮೂಲಕ ತಮ್ಮ ಶಾಲಾ ನಾಯಕರು ಹಾಗೂ ಮಂತ್ರಿಮಂಡಲದ ಸದಸ್ಯರನ್ನು ಆಯ್ಕೆ ಮಾಡಿದರು.
ಶಾಲಾ ನಾಯಕಿಯಾಗಿ ಸಂಜನಾ ಎಸ್ ಉಪ ನಾಯಕಿಯಾಗಿ ಶ್ರುತಾ ಆಯ್ಕೆಯಾಗಿರುತ್ತಾರೆ
ಈ ಚುನಾವಣಾ ಪ್ರಕ್ರಿಯೆಯನ್ನು ಶಾಲೆಯ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಸುಸೂತ್ರವಾಗಿ ನಡೆಸಲಾಯಿತು. ಸಂಘದ ಸಂಯೋಜಕರಾದ ಶ್ರೀಮತಿ ಕಸ್ತೂರಿ ಎಸ್., ಶಿಕ್ಷಕರಾದ ಶ್ರೀ ಮುರಳಿ ಪಿ. ಹಾಗೂ ಶ್ರೀಮತಿ ನೀತಾ ಕೆ.ಎಸ್. ಅವರ ನೇತೃತ್ವದಲ್ಲಿ ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಯಶಸ್ವಿಯಾಗಿ ನೆರವೇರಿದವು.
ಶಾಲಾ ಮುಖ್ಯ ಶಿಕ್ಷಕರಾದ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ,
ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿಯ ಅರಿವು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಪಡೆಯಿತು.

error: Content is protected !!