ಜವಾಹರಲಾಲ್ ನೆಹರೂ ಹಿಂದಿಕ್ಕಿದ ನರೇಂದ್ರ ಮೋದಿ: ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆ

 

 

 

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದು ಅವರು ಈಗ 12 ವರ್ಷಗಳನ್ನು ಪೂರೈಸಿದ್ದಾರೆ.

ಸತತ 4,399 ದಿನಗಳ ಅಧಿಕಾರಾವಧಿಯ ಪ್ರಮುಖ ಮೈಲಿಗಲ್ಲನ್ನು ದಾಟಿರುವ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಅಡಿ ಸಾರ್ವತ್ರಿಕ ಚುನಾವಣೆಗಳ ನಂತರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ನಡೆಸಿದ ನಿರಂತರ 4,398 ದಿನಗಳ ದಾಖಲೆಯನ್ನು ಈಗ ಪುಡಿಗಟ್ಟಿದ್ದಾರೆ.

1952 ರಿಂದ ನೆಹರು ಅವರ ಅಧಿಕಾರಾವಧಿಯನ್ನು ಈ ಹೋಲಿಕೆಗೆ ಪರಿಗಣಿಸಲಾಗಿದೆ. ಏಕೆಂದರೆ ಅವರು ದೇಶದ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆಯುವ ಪೂರ್ವದಲ್ಲಿ ಅಂದರೆ 1947 ಮತ್ತು 1952 ರ ನಡುವೆ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದ್ದರು. ಹೀಗಾಗಿ ಚುನಾಯಿತ ಸರ್ಕಾರಗಳ ಅವಧಿಯನ್ನು ಮಾತ್ರ ಈ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ.

error: Content is protected !!