
ಬೆಳ್ತಂಗಡಿ: ಮೆಸ್ಕಾಂ ಕಛೇರಿ ಬಳಿಯ ಕ್ಯಾಂಟಿನ್ ಒಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಮೇ 10ರಂದು ನಡೆದಿದೆ.
ಬೆಳ್ತಂಗಡಿ ಕೆಇಬಿ ಬಳಿಯಲ್ಲಿ ಪಡಂಗಡಿ ನಿವಾಸಿ ಸುಂದರ ಶೆಟ್ಟಿ ಎಂಬವರು ಹಲವಾರು ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದು ಭಾನುವಾರ ಕ್ಯಾಂಟಿನ್ ಗೆ ರಜೆ ಇರುವ ವೇಳೆ ವ್ಯಾಪಾರದ ಉದ್ಧೇಶದಿಂದ ವೆಶ್ಯಾವಾಟಿಕೆ ದಂಧೆ ನಡೆಸುತಿದ್ದಾರೆ ಎಂಬ ಮಾಹಿತಿಯಂತೆ ಬೆಳ್ತಂಗಡಿ ಪೊಲೀಸರು ಮೇ 10 ರ ಮಧ್ಯಾಹ್ನ ದಾಳಿ ನಡೆಸಿದ್ದಾರೆ.ಈ ವೇಳೆ ಮಾಲಕ ಸುಂದರ ಶೆಟ್ಟಿ, ಕಲ್ಲೇರಿ ನಿವಾಸಿ ಹೈದರ್, ನಾವೂರು ನಿವಾಸಿ ಉಸ್ಮಾನ್, ಅವರನ್ನು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಸ್ಘಳದಲ್ಲಿ ಹಣ , ಕಾಂಡೋಮ್ ಪತ್ತೆಯಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕೆಇಬಿ ಬಳಿ ಇರುವ ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿ ಕ್ಯಾಂಟಿನ್ ನಡೆಸುತ್ತಿರುವುದಲ್ಲದೆ ಬೆಡ್ ರೂಂ, ಶೌಚಾಲಯವನ್ನೂ ನಿರ್ಮಿಸಿಕೊಂಡು ಮನೆಯ ರೀತಿ ಮಾಡಿಕೊಂಡಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ್ ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.