
ಬೆಳ್ತಂಗಡಿ: ಚಾರ್ಮಾಡಿ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆ ಸಂತೆಕಟ್ಟೆ ಬಳಿ ಏಕಮುಖ ಸಂಚಾರ ಮಾಡಿರುವುದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಅದಲ್ಲದೇ ಇವತ್ತು ಎಲ್ಲೆಡೆ ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಭಾರೀ ಕಾರ್ಯಕ್ರಮಗಳು ಇದ್ದುದರಿಂದ ವಿಪರೀತ ವಾಹನ ದಟ್ಟನೆಯೂ ಕಂಡುಬಂದಿದ್ದು ಗುರುವಾಯನಕೆರೆ ಸೇರಿದಂತೆ ಇತರೆಡೆಯಲ್ಲಿಯೂ ಟ್ರಾಫಿಕ ಜಾಮ್ ಉಂಟಾಗಿದೆ.ಈ ನಡುವೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ವಿಪರೀತ ಬಿಸಿಲಿನಿಂದಾಗಿ ವಾಹನದಲ್ಲಿದ್ದವರು ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇವತ್ತು ವಿಪರೀತ ಕಾರ್ಯಕ್ರಮಗಳ ಒತ್ತಡದಲ್ಲಿ ಇರುವಾಗ ವಾಹನ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆಯನ್ನು ಕಾಮಗಾರಿ ನಡೆಸುವ ಗುತ್ತಿಗೆದಾರರು ಮಾಡದೇ ಈ ಬಿಸಿಲಿನಲ್ಲಿ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತಡೆ ಮಾಡಿರುವುದರಿಂದ ಹಲವಾರೂ ಕಾರ್ಯಕ್ರಮಗಳಿಗೆ ತೆರಳುವವರಿಗೆ ತುಂಬಾ ತೊಂದರೆಯಾಗಿದೆ. ಎಂದು ವಾಹನ ಸವಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.ಅದಲ್ಲದೇ ಕಾಮಗಾರಿ ನಡೆಯುತ್ತಿರುವ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಿರುವುದರಿಂದಲೂ ಒಂದಷ್ಟು ಸಂಚಾರಕ್ಕೆ ಇಕ್ಕಟ್ಟಾದ ಸ್ಥಿತಿ ನಿರ್ಮಾಣವಾಗಿದ್ದು, ಟ್ರಾಫಿಕ್ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ.