
ಬೆಳ್ತಂಗಡಿ: ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳನ್ನೊಳಗೊಂಡಂತೆ ಅಶಕ್ತ ಬಡ ಕುಟುಂಬಗಳ ಪಾಲಿನ ಆಶಾ ಕಿರಣ ಕೊಡುಗೈ ದಾನಿ ಶಶಿಧರ್ ಶೆಟ್ಟಿಯವರು ಸೇವಾ ರೂಪದಲ್ಲಿ ನವೀಕರಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿವಾರ ದೇವತೆ ರಕ್ತೇಶ್ವರಿಯ ಗುಡಿಯಲ್ಲಿ ಎ02 ಗುರುವಾರ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಶತಕಲಶಾಭಿಷೇಕವು ಬೆಳಿಗ್ಗೆ 11 ರಿಂದ ವಿವಿಧ ಧಾರ್ಮಿಕ ವಿದಿವಿಧಾನಗಳೊಂದಿಗೆ ನಡೆಯಲಿದೆ.ಈ ಪ್ರಯುಕ್ತ ಮಧ್ಯಾಹ್ನ ಭಕ್ತಾದಿಗಳಿಗೆ ಸೀರೆ ಪ್ರಸಾದ ವಿತರಣೆ ನಡೆಯಲಿದೆ.ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.