ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು: ಕಾಶಿ ಶೆಟ್ಟಿ ಸ್ಮರಣಾರ್ಥ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಉದ್ಯಮಿ  ಶಶಿಧರ್ ಶೆಟ್ಟಿ :

 

 

ಬೆಳ್ತಂಗಡಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ಮಕ್ಕಳ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ನೂತನ ಕಟ್ಟಡದ ಶಿಲಾನ್ಯಾಸವನ್ನು ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಗುರುವಾಯನಕೆರೆ ಇವರು ನೆರವೇರಿಸಿದರು .ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ ಗೌಡ ಪಾಂಜಾಳ, ಜೈ ಶ್ರೀರಾಮ್ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ, ಅಧ್ಯಕ್ಷ ಅಶೋಕ ಗೌಡ ಬರುoಗುಡೇಲು, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ ದoಬೆತ್ತಿಮಾರು,ಮಾಜಿ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಟ್ರಸ್ಟ್ ನ ಪದಾಧಿಕಾರಿಗಳು, ಮಾತಾಜಿಯವರು,ಪೋಷಕರು, ಪುಟಾಣಿಗಳು ಉಪಸ್ಥಿತರಿದ್ದರು.

error: Content is protected !!