
ಬೆಳ್ತಂಗಡಿ: ಗುರುವಾಯನಕೆರೆ ಮೂಡಬಿದ್ರೆ ರಸ್ತೆಯಲ್ಲಿ ₹1 ಕೋಟಿ ವೆಚ್ಚದ ನಗರಲಂಕಾರ ದೀಪವನ್ನು ಉದ್ಯಮಿಗಳಾದ ಶಶಿಧರ್ ಶೆಟ್ಟಿಯವರು ಡಿ 26 ರಂದು ಶಕ್ತಿನಗರದಲ್ಲಿ ದೀಪ ಬೆಳಗಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು ನಂತರ ಮಾತನಾಡಿದ ಅವರು ಅಭಿವೃದ್ಧಿಯ ಸಂಕಲ್ಪ ಹೊತ್ತು ಶಾಸಕ ಹರೀಶ್ ಪೂಂಜ ತಾಲೂಕಿಗೆ
ಸಾವಿರಾರು ಕೋಟಿ ಅನುದಾನದ ತಂದಿರುವುದಲ್ಲದೇ ಕುವೆಟ್ಟು ಗ್ರಾಮದ ಅಭಿವೃದ್ಧಿ ಗೆ ಅತೀ ಹೆಚ್ಚು ಅನುದಾನ ನೀಡಿ ಗುರುವಾಯನಕೆರೆ ಮೂಡಬಿದ್ರೆ ರಸ್ತೆಯ ಶಕ್ತಿನಗರದಲ್ಲಿ ರಸ್ತೆ ಸೌಂದರ್ಯಕ್ಕಾಗಿ ಉತ್ತಮ ರೀತಿಯ ದೀಪಲಂಕಾರ ವ್ಯವಸ್ಥೆ ಮಾಡಿದ್ದಾರೆ ಅವರಿಗೆ ಕುವೆಟ್ಟು ಗ್ರಾಮಸ್ಥರ ಪರವಾಗಿ ಅಭಿನಂದನೆಗಳು.ಮುಂದಿನ ದಿನಗಳಲ್ಲಿ ಈ ದೀಪಾಲಂಕಾರ ಉತ್ತಮ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಅದಕ್ಕಾಗಿ ಸಂಪೂರ್ಣ ಸಹಕಾರ ನೀಡಲು ಸದಾ ಸಿದ್ಧ ಎಂದರಲ್ಲದೇ ರಸ್ತೆಯ ನಡುವೆ ಇರುವ ವಿಭಾಜಕದಲ್ಲಿ ಪ್ರತಿಯೊಬ್ಬರು ಹೂವಿನ ಗಿಡ ನೆಟ್ಟು ಪೋಷಿಸಿ ನಗರಲಂಕಾರ ಹೆಚ್ಚಿಸುವ ಕೆಲಸ ಸ್ಥಳೀಯರು ಮಾಡಬೇಕಿದೆ ಎಂದರು.ಶಾಸಕ ಹರೀಶ್ ಪೂಂಜ ಮಾತನಾಡಿ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಗೆ ಸ್ಪಂದಿಸಿ ಉತ್ತಮ ರೀತಿಯ ದೀಪದ ವ್ಯವಸ್ಥೆ ಕಲ್ಪಿಸಿ ಶಕ್ತಿನಗರಕ್ಮೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಮುಗುಳಿ ನಾರಾಯಣ ರಾವ್ , ಮಮತಾ ಎಂ ಶೆಟ್ಟಿ, ಶಶಿರಾಜ್ ಶೆಟ್ಟಿ, ಪಂಚಾಯತ್ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.