ಬೆಳ್ತಂಗಡಿ:ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಲಾಯಿಲ ,ಮಹಿಳಾ ವೇದಿಕೆ ,ಯುವ ಬಿಲ್ಲವ ವೇದಿಕೆ ಲಾಯಿಲ ಆಶ್ರಯದಲ್ಲಿ
ಕೆಸರ್ ದ ಕಂಡೊಡು ಬಿರ್ವೆರೆ ಗೊಬ್ಬು ಕ್ರೀಡಾಕೂಟವು ಸೆಪ್ಟೆಂಬರ್ 28 ಆದಿತ್ಯವಾರ ಲಾಯಿಲ ಗ್ರಾಮದ ಹಂದೆವೂರು ಬೊಟ್ಟು ಎಂಬಲ್ಲಿ ನಡೆಯಲಿದೆ.ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷ್ಣಪ್ಪ ಪೂಜಾರಿ ಕೈಪ್ಲೋಡಿ ನೆರವೇರಿಸಲಿದ್ದಾರೆ, ಸಂಜೀವ ಪೂಜಾರಿ ದರ್ಖಾಸು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮಣ ಪೂಜಾರಿ ಅಧ್ಯಕ್ಷರು ಗು. ನಾ. ಸ್ವಾಮಿ ಸೇವಾ ಸಂಘ ಲಾಯಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಯವಿಕ್ರಮ ಕಲ್ಲಾಪು ಅಧ್ಯಕ್ಷರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ತಾಲೂಕು, ಭಗಿರಥ ಜಿ. ಅಧ್ಯಕ್ಷರು ಗುರುದೇವ ಸೇವಾ ಸಹಕಾರಿ ಸಂಘ, ಸಂಪತ್ ಸುವರ್ಣ ಅಧ್ಯಕ್ಷರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್, ಯುವ ವಾಹಿನಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಗು.ನಾ. ಸ್ವಾ. ಸೇವಾ ಸಂಘ ನಿರ್ದೆಶಕರುಗಳಾದ ಜಯಕುಮಾರ್ ನಡ, ಚಂದ್ರ ಶೇಖರ್ ಇಂದಬೆಟ್ಟು , ಲಾಯಿಲ ಗ್ರಾ.ಪಂ ಸದಸ್ಯರುಗಳಾದ ಜಯಂತಿ ಅನ್ನಡ್ಕ, ರಜನಿ ,ಸೇರಿದಂತೆ ನಾಗೇಶ್, ಅಶ್ವಥ್, ಜಗದೀಶ್, ಯೋಗೀಶ್ ಮಲೆಬೆಟ್ಟು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ..ಸಂಜೆ ಲಕ್ಷ್ಮಣ ಪೂಜಾರಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ ವಸಂತ ಸುವರ್ಣ ಲಾಯಿಲ, ಬಹುಮಾನ ವಿತರಣೆಯನ್ನು ಶೈಲೇಶ್ ಆರ್.ಜೆ.ಮಾಡಲಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ರೀತಿಯ ಕ್ರೀಡಾಕೂಟ ನಡೆಯಲಿದೆ. ಬಲೀಂದ್ರ ಲೆಪ್ಪು, ಪಾಡ್ದನ ಕಾರ್ಯಕ್ರಮದ ಗಮನ ಸೆಳೆಯಲಿದೆ.