ಆರ್ಮ್ಸ್ ಅ್ಯಕ್ಟ್ ನಡಿ ಪ್ರಕರಣ, ವಿಚಾರಣೆಗೆ ಹಾಜರಾಗದ ಮಹೇಶ್ ಶೆಟ್ಟಿ : ತಿಮರೋಡಿ ಮನೆಗೆ ಮತ್ತೆ ನೋಟೀಸ್ ಅಂಟಿಸಿದ ಪೊಲೀಸರು:

 

 

 

ಬೆಳ್ತಂಗಡಿ : ಮಹೇಶ್ ಶೆಟ್ಟಿ ಮನೆಯಲ್ಲಿ ಎಸ್.ಐ.ಟಿ ಶೋಧದ ವೇಳೆ ಆಗಸ್ಟ್ 26 ರಂದು ಎರಡು ಮರದ ಹಿಡಿಯಿದ್ದ ತಲವಾರು ಗನ್ ಸೇರಿದಂತೆ 44 ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರ್ಮ್ಸ್ ಆ್ಯಕ್ಟ್ ನಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.16 ರಂದು ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಪೊಲೀಸರು ಸೆ.19 ರಂದು ತಿಮರೋಡಿ ಮನೆಗೆ ತೆರಳಿದಾಗ ಮಹೇಶ್ ಶೆಟ್ಟಿ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರು ಗೋಡೆಗೆ ಸೆ.21 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಅಂಟಿಸಿ ಬಂದಿದ್ದರು.

ಆದರೆ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಸೆ.21 ರಂದು ಹಾಜರಾಗಲು ಅಸಾಧ್ಯ ಮುಂದಿನ ದಿನಗಳಲ್ಲಿ ಬರುವುದಾಗಿ ಆಪ್ತರ ಮೂಲಕ ತನಿಖಾಧಿಕಾರಿಗೆ ಮನವಿ ಪತ್ರ ನೀಡಿದ್ದರು. ವ ಸೆ.25 ರಂದು ತನಿಖೆಗೆ ಹಾಜರಾಗಲು ಮತ್ತೆ ತಿಮರೋಡಿ ಮನೆಯ ಗೋಡೆಗೆ ನೋಟೀಸ್ ಪೊಲೀಸರು ಅಂಟಿಸಿ ಬಂದಿದ್ದಾರೆ.

error: Content is protected !!