ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ: ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು:

 

 

ಬೆಳ್ತಂಗಡಿ : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಫೋಕ್ಸೋ ಕಾಯ್ದೆ ಪ್ರಕರಣದಡಿಯಲ್ಲಿ ಧರ್ಮಸ್ಥಳ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಧರ್ಮಸ್ಥಳ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಗೂಡಂಗಡಿಯ ಮಾಲಕನೊಬ್ಬ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂದಾರು ನಿವಾಸಿ ಇಬ್ರಾಹಿಂ ಯಾನೆ ಪುತ್ತುಮೋನು(55) ಎಂಬಾತನು‌ ಕಳೆದ ಕೆಲದಿನಗಳಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದ್ದು ಈ ಬಗ್ಗೆ ದೌರ್ಜನ್ಯಕ್ಕೆ ಈಡಾದವರ ಮನೆಯವರು ದೂರು ನೀಡಿದ್ದು. ಧರ್ಮಸ್ಥಳ ಠಾಣೆಯಲ್ಲಿ ಸೆ.18 ರಂದು ಪೋಕ್ಸೋ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕನನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಆರೋಪಿ ಇಬ್ರಾಹಿಂ ಅಲಿಯಾಸ್ ಪುತ್ತು ಮೋನು(55) ಎಂಬಾತನಾಗಿದ್ದು ಈತನ ವಿರುದ್ಧ ಪೋಕ್ಸೋ ಪ್ರಕರಣ‌ ದಾಖಲಿಸಲಾಗಿದ್ದು ಆರೋಪಿಯನ್ನು ಸೆ.19ರಂದು ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯೊಬ್ಬ ಅದನ್ನು ಸಾಮಾಜಿಕ ಜಲಾತಾಣದಲ್ಲಿ ಹಾಕಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಆತನ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

error: Content is protected !!