ಪೊಲೀಸ್ ತೆರಳಿದ ವೇಳೆ ಮನೆಯಲ್ಲಿರದ ಮಹೇಶ್ ಶೆಟ್ಟಿ ತಿಮರೋಡಿ: ವಿಚಾರಣೆಗೆ ಬರುವಂತೆ ಮನೆ ಗೋಡೆಗೆ ನೋಟಿಸ್ ಅಂಟಿಸಿದ ಪೊಲೀಸರು:

 

 

ಬೆಳ್ತಂಗಡಿ : ಎಸ್.ಐ.ಟಿ ಶೋಧದ ವೇಳೆ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಎರಡು ತಲವಾರ್ ಮತ್ತು ಒಂದು ಬಂದೂಕು ಸೇರಿದಂತೆ 44 ವಸ್ತುಗಳು ಪತ್ತೆಯಾಗಿರುವ ಬಗ್ಗೆ ಸೆ.16 ರಂದು ಎಸ್ಐಟಿ ಅಧಿಕಾರಿಯ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಅ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸೆ.19 ರಂದು ಬೆಳಗ್ಗೆ ಉಜಿರೆ ತಿಮರೋಡಿ ನಿವಾಸಕ್ಕೆ ತೆರಳಿದ ವೇಳೆ ಅವರು ಮನೆಯಲ್ಲಿ ಸಿಗದಿದ್ದಾಗ ಮನೆಯ ಗೋಡೆಗೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಅಂಟಿಸಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !!