ಬೆಳ್ತಂಗಡಿ: ಹೆದ್ದಾರಿಯಲ್ಲಿ ಮಹಾಗುಂಡಿಗಳನ್ನು ಮುಚ್ಚುವ ಹಾಗೂ ತೀರಾ ಹಾಳಾದ ಕಡೆಗಳಲ್ಲಿ ತೇಪೆ ಕೆಲಸ ಪ್ರಾರಂಭವಾಗಿದೆ.ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಭರದಿಂದ ಸಾಗುತಿದ್ದು ಭಾರೀ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದಾಗಿ ರಸ್ತೆ ನಡುವೆ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದೀಗ ಮಳೆ ಕಡಿಮೆಯಾದ ತಕ್ಷಣ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚುವ ಹಾಗೂ ತೀರಾ ಹಾಳಾದ ಕಡೆಗಳಲ್ಲಿ ತೇಪೆ ಕೆಲಸ ಪ್ರಾರಂಭವಾಗಿದೆ.ರಾಷ್ಟೀಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ನಿತ್ಯ ಸಂಚಾರಿಸುತಿದ್ದು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡುತ್ತ ಸಂಚಾರಿಸುವ ಸ್ಥಿತಿ ನಿರ್ಮಾಣವಾಗಿತ್ತು.ಹೊಂಡಗಳಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ತೊಂದರೆಯುಂಡಾಗಿತ್ತು. ಅದರೆ ಭಾರೀ ಮಳೆಯ ಕಾರಣದಿಂದಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ತೊಂದರೆಯಾಗಿದ್ದು ಇದೀಗ ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಕಾಮಗಾರಿ ಪ್ರಾರಂಭವಾಗಿರುವುದು ವಾಹನ ಸವಾರರಿಗೆ ಸ್ವಲ್ಪ ಸಮಾಧಾನ ತರಿಸಿದೆ.ಈಗಾಗಲೇ ಹೆದ್ದಾರಿ ಕಾಮಗಾರಿಯೂ ವೇಗ ಪಡೆದುಕೊಂಡಿದ್ದು, ರಸ್ತೆ ಬದಿಯ ಮರ ಹಾಗೂ ಇನ್ನಿತರ ಕೆಲಸಗಳು ವೇಗವಾಗಿ ನಡೆಯುತ್ತಿದೆ.