ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಆರೋಪಿ ಬುರುಡೆ ಚಿನ್ನಯ್ಯನಿಗೆ ಅಶ್ರಯ ನೀಡಿದ ಆರೋಪದಡಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಆ.26 ರಂದು ಬೆಳಗ್ಗೆ 9:30 ಕ್ಕೆ ದಾಳಿ ನಡೆಸಿ ಚಿನ್ನಯ್ಯನಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ಶೋಧ ನಡೆಸಿ ಮಹಜರು ನಡೆಸಿ ವಶಕ್ಕೆ ಪಡೆದಿದ್ದು. ಈ ದಾಳಿ ರಾತ್ರಿ 9:50 ರವರೆಗೆ ನಡೆದಿದೆ.
ಇನ್ನೂ ಮಹೇಶ್ ಶೆಟ್ಟಿ ಸಹೋದರ ಮೋಹನ್ ಶೆಟ್ಟಿಯವರ ಪಾಣ್ಯಲ್ ಎಂಬಲ್ಲಿರುವ ಮನೆಯಲ್ಲಿ ಕೂಡ ಆರೋಪಿ ಬುರುಡೆ ಚಿನ್ನಯ್ಯನಿಗೆ ಅಶ್ರಯ ನೀಡಿದ್ದರಿಂದ ರಾತ್ರಿ 10 ರಿಂದ ಶೋಧ ಕಾರ್ಯ ಮುಂದುರಿಸಿದ್ದಾರೆ. ಈ ದಾಳಿ ತಡರಾತ್ರಿವರೆಗೂ ನಡೆಯುವ ಸಾಧ್ಯತೆ ಇದೆ.