ಯೂಟ್ಯೂಬರ್ ಸಮೀರ್.ಎಮ್.ಡಿ ಎರಡು ಮನೆಗೆ ಪೊಲೀಸ್ ಎಂಟ್ರಿ

 

 

 

ಬೆಳ್ತಂಗಡಿ : ಯೂಟ್ಯೂಬರ್ ಸಮೀರ್ ಎಮ್.ಡಿ ಗೆ ಮಂಗಳೂರು ಕೋರ್ಟ್ ನಿಂದ ಜಾಮೀನು ಲಭಿಸಿದರೂ ಧರ್ಮಸ್ಥಳ ಪೊಲೀಸರ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ಸಮೀರ್ ಎಮ್.ಡಿ ಕೋರ್ಟ್ ಗೆ ನೀಡಿದ ವಿಳಾಸಗಳಾದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಂಡಿಹಟ್ಟಿ ನಿವಾಸಕ್ಕೆ ಆ.22 ರಂದು ನೋಟಿಸ್ ನೀಡಲು ತೆರಳಿದಾಗ ಮನೆ ಬಾಗಿಲಿಗೆ ಬೀಗ ಹಾಕಿದ್ದು ನಂತರ ನೋಟಿಸ್ ಮನೆಯ ಗೋಡೆಗೆ ಅಂಟಿಸಿದ್ದಾರೆ. ಮತ್ತೊಂದು ಧರ್ಮಸ್ಥಳ ಪೊಲೀಸರ ತಂಡ ಬೆಂಗಳೂರು ಜಿಗಣಿಯಲ್ಲಿರುವ ಹುಲ್ಲಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಹೋದಾಗ ಕೂಡ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು ಬಳಿಕ ಪೊಲೀಸರು ಗೋಡೆಗೆ ನೋಟಿಸ್ ಅಂಟಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಇ-ಮೇಲ್ ಹಾಗೂ ಮೊಬೈಲ್ ನಂಬರ್ ಗೆ ಸಂಪರ್ಕ ಮಾಡಿದ್ರೂ ಯಾವುದೇ ಉತ್ತರ ಬರುತ್ತಿಲ್ಲ. ನೋಟಿಸ್ ನಲ್ಲಿ ಆ.24 ರಂದು ಭಾನುವಾರ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಕಚೇರಿಗೆ ತನಿಖೆಗೆ ಬರಲು ಸೂಚನೆ ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಕೋರ್ಟ್ ಗೆ ದಾಖಲೆ ಸಲ್ಲಿಸಿ ನಿರೀಕ್ಷಣಾ ಜಾಮೀನು ರದ್ದು ಮಾಡಿ ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

error: Content is protected !!