ಮತ್ತೆ ಉಲ್ಟಾ ಹೊಡೆದ ಸುಜಾತ ಭಟ್: ಬೆದರಿಸಿ ವಿಡಿಯೋ ಮಾಡಿದ್ದಾರೆ ಎಂದು ಆರೋಪ:

 

 

 

ಬೆಳ್ತಂಗಡಿ: ಬೆದರಿಸಿ ವಿಡಿಯೋ ಮಾಡಲಾಗಿದೆ. ಎಂದು ಸುಜಾತ ಭಟ್ ಹೇಳಿಕೆ ನೀಡುವ ಮೂಲಕ ಮತ್ತೆ ಉಲ್ಟಾ ಹೊಡೆದಿದ್ದಾರೆ.ಯೂಟ್ಯೂಬ್ ಚಾನಲ್ ಒಂದರಲ್ಲಿ ಅನನ್ಯ ನನ್ನ ಮಗಳಲ್ಲ ನಾಪತ್ತೆ ಪ್ರಕರಣ ಕಟ್ಟು ಕಥೆ ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ ಟಿ. ಈ ರೀತಿ ಮಾಡುವಂತೆ ತಿಳಿಸಿದ್ದರಿಂದ ಮಾಡಿದ್ದೇನೆ ಎಂದು ಹೇಳಿದ್ದ ಸುಜಾತ ಭಟ್ ಮತ್ತೆ ಉಲ್ಟಾ ಹೊಡೆದಿದ್ದಾರೆ.ನನಗೆ ಬೆದರಿಕೆ ಒಡ್ಡಿ ಈ ರೀತಿ ಹೇಳಿಕೆ ಪಡೆದುಕೊಂಡಿದ್ದಾರೆ. ಕಾರಲ್ಲಿ ಕೂರಿಸಿ ಈ ರೀತಿ ಹೇಳುವಂತೆ ಬೆದರಿಕೆ ಹಾಕಿದ್ದರಿಂದಾಗಿ ಆ ರೀತಿ ಹೇಳಬೇಕಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಗಂಟೆಗೊಂದು ತಿರುವು ಪಡೆಯುತಿದ್ದು,ಸತ್ಯಾಸತ್ಯತೆ ಎಸ್ಐಟಿ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.

error: Content is protected !!