ಬೆಳ್ತಂಗಡಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಅನನ್ಯ ಭಟ್ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದೆ.ಅನನ್ಯ ಭಟ್ ನಾಪತ್ತೆ ಪ್ರಕರಣ ಕಟ್ಟುಕಥೆ, ನನ್ನ ಮಗಳು ಅಲ್ಲ ಮೊನ್ನೆ ತೋರಿಸಿದ ಪೋಟೋ ನಕಲಿ ಎಂದು ಅನನ್ಯ ಭಟ್ ತಾಯಿ ಎಂದು ಹೇಳಿಕೊಂಡಿದ್ದ ಸುಜಾತ ಭಟ್ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಉಡುಪಿಯಲ್ಲಿ ಜಾಗವಿದ್ದು ನನ್ನ ಗಮನಕ್ಕೆ ಬಾರದೆ ಈ ಜಾಗ ಮಾರಾಟ ಮಾಡಲಾಗಿತ್ತು. ಈ ಜಾಗ ಮತ್ತೆ ನಿಮಗೆ ಸಿಗುವಂತಾಗಲು ಈ ರೀತಿ ಮಾಡಬೇಕು ಎಂದು ಗಿರೀಶ್ ಮಟ್ಟಣ್ಣನವರು ಮತ್ತು ಜಯಂತ ಟಿ ತಿಳಿಸಿದ್ದು, ಅದರಂತೆ ನಾನು ನಡೆದುಕೊಂಡಿದ್ದೇನೆ ನನಗೆ ಯಾವುದೇ ಮಗಳು ಇರುವುದಿಲ್ಲ ಇದೆಲ್ಲ ಕಟ್ಟು ಕಥೆಯಾಗಿದೆ ಎಂಬ ಬಗ್ಗೆ ತಿಳಿಸಿದರಲ್ಲದೇ ಹಿಂದೂ ದೇವಸ್ಥಾನ ಜೈನರಿಗೆ ಹೋಗುವುದು ಇಷ್ಟವಿಲ್ಲ ಎಂಬ ಬಗ್ಗೆಯೂ ಮಾತನಾಡಿದ್ದಾರೆ.ಕೊನೆಗೂ ಕುತೂಹಲ ಕೆರಳಿಸಿದ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.