ವಿಧಾನ ಸಭೆಯಲ್ಲಿ ಅಂಗೀಕಾರಗೊಂಡ ಅಂತರ್ಜಲ ತಿದ್ದುಪಡಿ ಮಸೂದೆ: ಬೋರ್ ವೆಲ್ ನಿಂದ ,25 ಸಾವಿರ ಲೀಟರ್ ಗಿಂತ ಹೆಚ್ವು ನೀರು ತೆಗೆದರೆ ಶುಲ್ಕ:

 

 

 

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಅಂತರ್ಜಲ ಸಂರಕ್ಷಣೆ, ಪುನಶ್ಚೇತನಕ್ಕೆ ಒತ್ತು ನೀಡುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ) ತಿದ್ದುಪಡಿ ಮಸೂದೆಯನ್ನು ವಿಧಾನಪರಿಷತ್​ನಲ್ಲೂ ಅನುಮೋದನೆ ಪಡೆಯಲಾಯಿತು.

ತಿದ್ದುಪಡಿ ಕಾಯ್ದೆಯಂತೆ ಇನ್ನು ಮುಂದೆ ದಿನಕ್ಕೆ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಕೊಳವೆಬಾವಿಯಿಂದ ನೀರು ಹೊರತೆಗೆಯಬೇಕಿದೆ. ಪ್ರಾಧಿಕಾರದ ಅನುಮತಿ ಪಡೆಯದೆ ಬೋರ್​ವೆಲ್ ಕೊರೆಯುವಂತಿಲ್ಲ. ಖಾಸಗಿ ಟ್ಯಾಂಕರ್​ಗಳ ಮಾಲೀಕರು ನೀರು ತೆಗೆಯಲು ಎನ್​​ಒಸಿ ಪಡೆಯುವುದು ಕಡ್ಡಾಯವಾಗಿರಲಿದೆ. ಪ್ಯಾಕೇಟ್​ ಕುಡಿಯುವ ನೀರು ತಯಾರಕರಿಗೆ 1 ರಿಂದ 25 ಸಾವಿರ ಲೀಟರ್​​ವರೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂಬ ನಿಯಮ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ.

ಇದಲ್ಲದೇ, ಗಣಿ- ಕೈಗಾರಿಕೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗೆ 25 ಸಾವಿರ ಲೀಟರ್​ನಿಂದ 2 ಲಕ್ಷ ಲೀಟರ್ ನೀರು ಬಳಸಿದರೆ ಪ್ರತಿ ಸಾವಿರ ಲೀಟರ್​​ಗೆ 1 ರೂಪಾಯಿ ಶುಲ್ಕ, ಅಪಾರ್ಟ್​ಮೆಂಟ್ ಹಾಗೂ ಗ್ರೂಪ್ ಹೌಸ್​ಗಳು 2 ಲಕ್ಷ ಲೀಟರ್​ಗಿಂತ ಹೆಚ್ಚು ನೀರು ಹೊರ ತೆಗೆದರೆ ಸಾವಿರ ಲೀಟರ್​​ಗೆ 2 ರೂಪಾಯಿ ಶುಲ್ಕ ಪಾವತಿಸಬೇಕಿದೆ. ನಿಯಮ ಮೀರಿದರೆ ಗರಿಷ್ಠ 25 ಸಾವಿರ ದಂಡ ಪಾವತಿಸುವಂತೆ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ

error: Content is protected !!