ಬೆಂಗಳೂರು:, ವಿಧಾನ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದ ಚರ್ಚೆಯ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಎಸ್ ಐಟಿಯನ್ನು ಸ್ವಾಗತಿಸ್ತೇವೆ. ನಾನು ಕ್ಷೇತ್ರದ ಶಾಸಕನಾಗಿ ಹೇಳುತ್ತಿದ್ದೇನೆ. ಇಲ್ಲಿಯವರೆಗೆ ನಾನು ಮಾತನಾಡಿರಲಿಲ್ಲ. ತನಿಖೆಗೆ ಯಾಕೆ ಅಡ್ಡಿ ಮಾಡಬೇಕೆಂದು ಮಾತನಾಡಲಿಲ್ಲ. ಮಾಧ್ಯಮಗಳು ಇವತ್ತು ಬೆಳಕು ಚೆಲ್ಲುತ್ತಿವೆ. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಸೋಶಿಯಲ್ ಮೀಡಿಯಾ ಹಾಳುಮಾಡುತ್ತಿವೆ. ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡುತ್ತಿವೆ. ಹೋರಾಟಗಾರರು ಹಾದಿಬೀದಿಯಲ್ಲಿ ಮಾತನಾಡುತ್ತಾರೆ. ನಮ್ಮಲ್ಲಿ ಸಾಕ್ಷಿ ಇವೆ ಅಂತ ಹೇಳುತ್ತಾರೆ. ಸೌಜನ್ಯ ಪ್ರಕರಣ ಯಾಕೆ ಮರು ತನಿಖೆ ಮಾಡಲಿಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು. ಯೂಟ್ಯೂಬ್ ಗಳಿಂದಲೇ ಗೊಂದಲ ಶುರುವಾಗಿದೆ. ಎರಡು ವರ್ಷದ ಹಿಂದಿನ ಮಹೇಶ್ ತಿಮರೋಡಿ ಮಾತನ್ನು ಹಾಕಿದ್ದಾರೆ. ಕಟ್ ಆಂಡ್ ಪೇಸ್ಟ್ ಮಾಡಲಾಗಿದೆ. ಇದನ್ನು ಆಧರಿಸಿ ವಿಪಕ್ಷ ನಾಯಕರು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳು ದಾರಿತಪ್ಪಿಸುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.