ಬೆಳ್ತಂಗಡಿ:ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಹಳೇಕೋಟೆ ಬಳಿ ವಾಹನವೊಂದು ಹಾಳಾಗಿ ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ಒಂದು ಕಡೆಯಿಂದ ಭಾರೀ ಮಳೆ ಇನ್ನೊಂದೆಡೆ ಟ್ರಾಫಿಕ್ ಜಾಮ್ ಕಿರಿಕಿರಿ ಅದಲ್ಲದೇ ಭಾನುವಾರ ಅಗಿರುವುದರಿಂದ ಅಧಿಕ ವಾಹನ ದಟ್ಟನೆ ಕೂಡ ಇರುವುದರಿಂದ ನೂರಾರು ವಾಹನಗಳು ಆಮೆಗತಿಯಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸತ್ತ ವಾಹನ ಸವಾರರೊಬ್ಬರು ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.