ಬೆಳ್ತಂಗಡಿ : ರಾಜಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಆಟಿ ಅಮವಾಸ್ಯೆಯ ಪ್ರಯುಕ್ತ ಪಾಲೆ ಮರದ ಕಷಾಯ
ಮತ್ತು ಮೆಂತ್ಯೆ ಗಂಜಿ ವಿತರಣೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜಕೇಸರಿ ಟ್ರಸ್ಟ್ ರಿ ಇದರ ಜಿಲ್ಲಾಧ್ಯಕ್ಷ ಸಂತೋಷ್ ಕೂಲ್ಯ ನೆರೆವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಉದ್ಯಮಿ
ಕಿರಣ್ ಚಂದ್ರ ಡಿ ಪುಷ್ಪಗಿರಿ ಮಾತನಾಡಿ ಸದಾ ಜನರಿಂದ ಜನರಿಗೋಸ್ಕರ ಸೇವೆಯನ್ನು ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಏಕೈಕ ಸಂಘಟನೆ ದೀಪಕ್ ಜಿ ಮುನ್ನಡೆಸುತ್ತಿರುವ
ರಾಜಕೇಸರಿ ಸೇವಾ ಸಂಸ್ಥೆ ಎಂದರು.ತುಳು ನಾಡಿನ ಆಚಾರ ವಿಚಾರ ಸಂಸ್ಕ್ರತಿ
ನಶಿಸಿ ಹೋಗುತ್ತಿದ್ದು ಇದನ್ನು ಉಳಿಸುವ ಪ್ರಯತ್ನ ಸಂಘಟನೆಯ ಮೂಲಕ ನಡೆಯುತ್ತಿದೆಯಲ್ಲದೇ ಆಟಿ ಅಮಾವಾಸ್ಯೆಯಂದು ವಿಶೇಷವಾಗಿ ಪಾಲೆದ ಕಷಾಯ ಕುಡಿದರೆ ಸರ್ವ ರೋಗಗಳಿಗೂ ರಾಮಬಾಣವಾಗುತ್ತದೆ ಎಂಬುವುದು ನಮ್ಮ ಹಿರಿಯರ ನಂಬಿಕೆ. ಅದನ್ನು ಉಳಿಸುವ ಕೆಲಸ ವನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದರು. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ತನಕ ಸರಿಸುಮಾರು 500 ಕ್ಕಿಂತ ಅಧಿಕ ಮಂದಿ ಕಷಾಯ ಹಾಗೂ ಮೆಂತ್ಯೆ ಗಂಜಿ ಸೇವಿಸಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ..
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ,
ವಿಜಯವಾಣಿ ದಿನಪತ್ರಿಕೆಯ ವರದಿಗಾರ ಮನೋಹರ್ ಬಳಂಜ ವಿವಿಧ ಧರ್ಮದ ಧಾರ್ಮಿಕ ಮುಖಂಡರು,
ಸಂಘ ಸಂಸ್ಥೆಗಳು, ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೀಪಕ್ ಜಿ ,
ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸತೀಶ್ ಕಂಗಿತ್ತಿಲ್
ಹಾಗೂ ರಾಜ ಕೇಸರಿ ಸಂಘಟನೆಯ ಪದಾಧಿಕಾರಿಗಳಾದ
ಪ್ರೇಮ್ ರಾಜ್, ರೋಷನ್ ಸ್ವಿಕೇರಾ, ಪ್ರಶಾಂತ್ ಗುರುವಾಯನಕೆರೆ,
ಸಂಪತ್, ಜಗದೀಶ್, ವಿನೋದ್ ಲೈಲಾ .ಸಂದೇಶ್. ಗಣೇಶ್ . ಕಿಶನ್, ದೇವರಾಜ್,
ಹಾಗೂ ರಾಜ ಕೇಸರಿ ಜಿಲ್ಲಾ ಪದಾಧಿಕಾರಿಗಳಾದ ಲೋಕೇಶ್ ಮಂಗಳದೇವಿ , ವರುಣ್ ಉಪಸ್ಥಿತರಿದ್ದರು.