ಸೌತಡ್ಕ , ಆನೆ ದಾಳಿಗೆ ವ್ಯಕ್ತಿ ಬಲಿ, ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ, ಸೂಕ್ತ ಪರಿಹಾರ ಹಾಗೂ ,ಉದ್ಯೋಗದ ಭರವಸೆ: ಕೃಷಿಕರ ಭಾವನೆಗಳನ್ನು ಕಲಾಪದಲ್ಲಿ ವ್ಯಕ್ತಪಡಿಸಿದ್ದಕ್ಕೆ ಟ್ರೋಲ್ ಆಗಿದ್ದೆ,

 

 

 

ಬೆಳ್ತಂಗಡಿ : ಕಾಡಾನೆ ದಾಳಿಯಿಂದ ಜುಲೈ 17 ರಂದು ಮೃತಪಟ್ಟ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ನಿವಾಸಿ ಬಾಲಕೃಷ್ಣ ಶೆಟ್ಟಿ(60) ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜುಲೈ18 ರಂದು ಸಂಜೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.ಈ ಬಗ್ಗೆ ಮಾತನಾಡಿದ ಅವರು

ಘಟನೆ ತಿಳಿದ ಕೂಡಲೇ ಡಿಎಫ್ಒ ರಜೆಯಲ್ಲಿದ್ದರೂ ಅವರನ್ನು ಸಂಪರ್ಕಿಸಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಇಲಾಖೆಯಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ ನಿಟ್ಟಿನಲ್ಲಿ ಈಗಾಗಲೇ ಸರಕಾರ ₹ 20 ಲಕ್ಷ
ಪರಿಹಾರ ಮತ್ತು ಇಲಾಖೆಯಿಂದ ಐದು ವರ್ಷಗಳವರೆಗೆ ಮಾಸಿಕವಾಗಿ 4 ಸಾವಿರದಂತೆ ಸಹಾಯಧನ ಮನೆಯವರಿಗೆ ಸಿಗಲಿದೆ. ಮನೆಗೆ ಆಧಾರವಾಗಿದ್ದ ಕೂಲಿ ಕಾರ್ಮಿಕ ಬಾಲಕೃಷ್ಣ ಶೆಟ್ಟಿಯವರ  ಮನೆಯ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ಆನೆ ದಾಳಿಯಿಂದ ಬೆಳ್ತಂಗಡಿ ತಾಲೂಕಿನ ಕೃಷಿಕರು ಕಂಗೆಟ್ಟು , ಸಂಕಷ್ಟದಲ್ಲಿ ಅವರು  ಹತಾಶೆಯಿಂದ  ಯಾವ ರೀತಿಯ  ಭಾವನೆ ಅವರಿಗಾಗಿದೆ ಎಂಬುವುದನ್ನು ಅಧಿವೇಶನದ ಕಲಾಪದಲ್ಲಿ ವ್ಯಕ್ತಪಡಿಸಿದ್ದನ್ನು  ಕೆಲವರು ಟ್ರೋಲ್ ಮಾಡಿ ಅಪಹಾಸ್ಯ ಮಾಡಿದ್ದಾರೆ. ಇವತ್ತು ಬೆಳ್ತಂಗಡಿ ಜನತೆಗೆ ವಾಸ್ತವ ವಿಚಾರ  ಗೊತ್ತಾಗಿದೆ, ಅದ್ದರಿಂದ  ಇನ್ನಾದರೂ ಆನೆಗಳು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಕಂಬಿಗಳ ತಡೆ ಬೇಲಿ , ಕಂದಕ ನಿರ್ಮಾಣದಂತಹ ಸೂಕ್ತ ಕ್ರಮಗಳನ್ನು ಕೈಗೊಂಡು ಕೃಷಿಕರನ್ನು ರಕ್ಷಿಸುವತ್ತ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಅದೇ ರೀತಿ  ಆನೆಗಳನ್ನು  ಸ್ಥಳಾಂತರ ಮಾಡುವ  ಬಗ್ಗೆ ತಜ್ಞರ ತಂಡದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು. ಈಗಾಗಲೇ ಅರಣ್ಯ ಸಚಿವರಲ್ಲಿ ಆನೆ ಕ್ಯಾಂಪ್ ಮಾಡುವಂತೆ ವಿನಂತಿಯನ್ನು ಮಾಡಲಾಗಿದ್ದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಭೇಟಿ ವೇಳೆ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ , ಮಾಜಿ ಅಧ್ಯಕ್ಷ ಯೋಗೀಶ್ ಅಲಂಬಿಲ, ರಾಘವೇಂದ್ರ,ಕುಶಾಲಪ್ಪ ಗೌಡ ಪೂವಾಜೆ, ಉಪ್ಪಿನಂಗಡಿ ಎಸಿಎಫ್ ಸುಬ್ಬಯ್ಯ ನಾಯ್ಕ್, ಪ್ರೋಬೇಷನರಿ ಹಸ್ತ ಶೆಟ್ಟಿ, ಉಪ್ಪಿನಂಗಡಿ ಅರ್.ಎಫ್.ಓ ರಾಘವೇಂದ್ರ ಭಾಗಿಯಾಗಿದ್ದರು‌‌.

error: Content is protected !!