ಬೆಳ್ತಂಗಡಿ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನಂತೆ 7 ಮಂದಿಯ ವಿರುದ್ಧ ವೇಣೂರು ಠಾಣೆಯಲ್ಲಿ ಜು.13ರಂದು ಪ್ರಕರಣ ದಾಖಲಾಗಿದೆ.
ಮುಡುಕೋಡಿ ಗ್ರಾಮದ ಕೊಳಂಗಜೆ ಮನೆ ಶೇಖರ ಪೂಜಾರಿ ಎಂಬವರು ಈ ದೂರನ್ನು ನೀಡಿದ್ದಾರೆ.
ಶ್ರೀಮತಿ ಪದ್ಮಾವತಿ , ಉದಯ, ಶ್ರೀಮತಿ ಉಷಾ, ಸುಕುಮಾರ ಶೆಟ್ಟಿ , ಶ್ರೀಮತಿ ವಿನೋದ, ಅನಿಲ್ ಕುಮಾರ್ ಶೆಟ್ಟಿ ಹಾಗೂ ಮುರುಳಿ ಕೃಷ್ಣ ಭಟ್ ಎಂಬುವವರ ವಿರುದ್ಧ ಈ ದೂರನ್ನು ನೀಡಿದ್ದಾರೆ.
ಶೇಖರ ಪೂಜಾರಿ ತಂದೆ: ದಿ.ಅಣ್ಣು ಪೂಜಾರಿ ( ಮೀನಾಕ್ಷಿ ರವರಿಂದ ಜನರಲ್ ಪವರ್ ಆಪ್ ಅಟರ್ನಿ ಪಡೆದುಕೊಂಡವರು) ಬೆಳ್ತಂಗಡಿ ತಾಲೂಕು ಮುಡುಕೋಡಿ ಗ್ರಾಮದ ಕೊಳಂಗಜೆ ಎಂಬಲ್ಲಿ ಸರ್ವೆ ನಂಬ್ರ 27/7ಎ1 ರಲ್ಲಿ 3.14 ಎಕ್ರೆ , 138/3ಬಿ ರಲ್ಲಿ 0.82 ಎಕ್ರೆ, , 170/3 ರಲ್ಲಿ 1.10, 170/4 ರಲ್ಲಿ 0.98 , 27/19ಎ ರಲ್ಲಿ 0.79, 27/5 ರಲ್ಲಿ 0.22, 130/3 ರಲ್ಲಿ 0.18, 130/4 ರಲ್ಲಿ 0.10, 146/2ಬಿ ರಲ್ಲಿ 0.60, 151/1ಎ1 ರಲ್ಲಿ 0.49 ಹಾಗೂ 151/2 ರಲ್ಲಿ 0.33 ರಲ್ಲಿ ಒಟ್ಟು 4.79 ಎಕ್ರೆ ಜಾಗ ಮತ್ತು ಸರ್ವೆ ನಂಬ್ರ 27/16 ರಲ್ಲಿ 0.1.20 ಎಕ್ರೆ ಸ್ಥಿರಾಸ್ತಿಯನ್ನು ಹೊಂದಿದ್ದು ಸದ್ರಿ ಸ್ಥಿರಾಸ್ಥಿಯನ್ನು ಪದ್ಮಾವತಿ ಎಂಬವರು ಶೇಖರ ಪೂಜಾರಿಯವರ ಅತ್ತೆಯಾದ ಮೀನಾಕ್ಷಿರವರ ಹೆಸರನ್ನು ತನ್ನದೇ ಹೆಸರು ಪದ್ಮಾವತಿ ಯಾನೆ ಮೀನಾಕ್ಷಿ ಎಂದು ಬಿಂಬಿಸಿ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಶೇಖರ ಪೂಜಾರಿಯವರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ನಂತರ ತನ್ನ ಮಕ್ಕಳಾದ ಉದಯ ಹಾಗೂ ಉಷಾರವರ ಹೆಸರಿಗೆ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಉಷಾ ಅವರು ತನಗೆ ಬಂದ ಆಸ್ತಿಯನ್ನು ಸುಕುಮಾರ್ ಶೆಟ್ಟಿಯವರಿಗೆ ಮಾರಾಟ ಮಾಡಿದ್ದು ಇದಕ್ಕೆ ಶ್ರೀಮತಿ ವಿನೋದ, ಅನಿಲ್ ಕುಮಾರ್ ಶೆಟ್ಟಿ , ಮುರುಳಿ ಕೃಷ್ಣ ಭಟ್ ಸಹಕರಿಸಿ ಪಿರ್ಯಾದಿದಾರರಿಗೆ ವಂಚಿಸಿ, ಮೋಸಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ .ಇವರಲ್ಲಿ ಉದಯ ಮತ್ತು ಶ್ರೀಮತಿ ಉಷಾ ಅವರು ಬ್ಯಾಂಕ್ ನಿಂದ ಅಡಮಾನ ಸಾಲ ಪಡೆದುಕೊಂಡಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೇಣೂರು ಪೊಲೀಸ್ ಠಾಣಾ ಅ.ಕ್ರ 65-2025 ಕಲಂ 319, 318(2), 318(4),336(3), 338, 340(2) BNS 2023ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೈಲ ಡಿ ಮುರುಗೋಡಪಿ ಎಸ್ ಐ ವೇಣೂರು ಮುಂದಿನ ತನಿಖೆ ನಡೆಸುತ್ತಿದ್ದಾರೆ.