ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ” “ಮಕ್ಕಳ ಚಿತ್ತ ‘ಮಲೆ’ನಾಡಿನ ವೈಭವದತ್ತ” ಎಂಬ ಪರಿಕಲ್ಪನೆಯೊಂದಿಗೆ ಸಮಾಜ ಕಾರ್ಯ ಬುಡಕಟ್ಟು ಅಧ್ಯಯನ ಶಿಬಿರ ಸಮಾರೋಪ

 

 

 

 

ಬೆಳ್ತಂಗಡಿ : ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳ ಗಂಗೋತ್ರಿ ಕೋಣಾಜೆ ಪ್ರಥಮ ವರ್ಷದ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದಲ್ಲಿ ಮೇ6ರಿಂದ 12ರವರೆಗೆ “ಮಕ್ಕಳ ಚಿತ್ತ ‘ಮಲೆ’ನಾಡಿನ ವೈಭವದತ್ತ” ಎಂಬ ಪರಿಕಲ್ಪನೆಯೊಂದಿಗೆ
‘ಬುಡಕಟ್ಟು ಅಧ್ಯಯನ ಶಿಬಿರ’ವು ನಡೆಯಿತು.
ಒಟ್ಟು ಏಳು ದಿನಗಳಲ್ಲಿ ಮಲೆಕುಡಿಯ ಸಮುದಾಯದ ಬುಡಕಟ್ಟು ವಿಚಾರಗಳ ಮೂಲ ಅಧ್ಯಯನ ಮಲೆಕುಡಿಯರ ಮಲೆ ಚಾಮುಂಡೇಶ್ವರಿ ದೇವಸ್ಥಾನ ಜಾತ್ರೆ ವೀಕ್ಷಣೆ , ಸಮುದಾಯದ ಕೆಲವು ಪ್ರಮುಖ ಸ್ಥಳಗಳಲ್ಲಿ
ಬೀದಿ ನಾಟಕ, ಜಾಗೃತಿ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಮತ್ತು
ಮಲೆಕುಡಿಯ ಸಮುದಾಯದವರಿಗೆ ಉಚಿತ ವೈದ್ಯಕೀಯ ತಪಾಸಣೆ ಇತ್ಯಾದಿ ಸಮುದಾಯಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
12ರಂದುಸಮಾರೋಪ ಪೂರ್ವದ ಗೋಷ್ಠಿಯಲ್ಲಿ ‌ಬೆಳ್ತಂಗಡಿಯ ಪತ್ರಕರ್ತ ಅಚುಶ್ರೀ ಬಾಂಗೇರು

ಸಂಪನ್ಮೂಲವ್ಯಕ್ತಿಯಾಗಿ
“ಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳ ಪಾತ್ರ” ಎಂಬ ವಿಷಯ ಮಂಡನೆಗೈದರು.
ಸಂಜೆ ನಡೆದ
ಶಿಬಿರದ ಅಂತಿಮ ಘಟ್ಟವಾದ ಸಮಾರೋಪ ಸಮಾರಂಭವು ಮಂಗಳೂರು ವಿಶ್ವವಿದ್ಯಾನಿಲಯದ
ಸಮಾಜಕಾರ್ಯ ವಿಭಾಗದ
ಅಧ್ಯಕ್ಷ ಡಾ. ಪೌಲ್ ಜಿ ಅಕ್ವೀನಾಸ್
ಅಧ್ಯಕ್ಷತೆಯಲ್ಲಿ ನಡೆಯಿತು.

 

 

 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲೆಕುಡಿಯ ಸಮುದಾಯದ ಹಿರಿಯರಾದ ಮಂಜಪ್ಪ ಮಲೆಕುಡಿಯ,
ಸ. ಹಿ. ಪ್ರಾ. ಶಾಲೆ ನೆರಿಯಾ ಇದರ ಎಸ್. ಡಿ.ಎಂ.ಸಿ ಅಧ್ಯಕ್ಷ
ಸತೀಶ್ ಭರ್ತಾಜ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ
ಸಾಂದರ್ಭಿಕವಾಗಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ
ನವೀನ್ ನೆರಿಯ ಭಾರತ ಮಾತಾ ಪೂಜೆಯನ್ನು ನೆರವೇರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ
ವಿದ್ಯಾರ್ಥಿ ಪರಿಷತ್ ಅಧ್ಯಕ್ಷ
ಮದನ್ ಕುಮಾರ್ ಕೆ.,
ಸಾಂಸ್ಕೃತಿಕ ಕಾರ್ಯದರ್ಶಿ
ರಾಮಪ್ರಸಾದ್ ಬಿ.ಟಿ., ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಶಿಬಿರದ ಸಂಯೋಜಕಿ ವಿನುತಾ ಕೆ ಸ್ವಾಗತಿಸಿದರು.
ವಿದ್ಯಾರ್ಥಿ ಪ್ರತಿನಿಧಿ ಆರ್ ಸೂರ್ಯ ಶಿಬಿರದ ವರದಿ ವಾಚನಗೈದರು.
ವಿದ್ಯಾರ್ಥಿ ಪ್ರತಿನಿಧಿ ಆಸಿಕಾ ಬಿ ಅತಿಥಿಗಳಿಗೆ ಸ್ಮರಣಿಕೆ ಹಸ್ತಾಂತರಿಸಿದರು.
ಮೋಕ್ಷಾ ಬಿ, ಶ್ರೇಯಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಶಿಬಿರ ನಿರ್ದೇಶಕಿ
ಡಾ. ಯಶಸ್ವಿನಿ ಬಟ್ಟಂಗಾಯ ಧನ್ಯವಾದವಿತ್ತರು.

error: Content is protected !!