ಗುರುವಾಯನಕೆರೆ ಎಕ್ಸೆಲ್ ಕಾಲೇಜ್ ಮತ್ತೊಂದು ಸಾಧನೆ: 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 422 ಮಂದಿ ಫಸ್ಟ್ ಕ್ಲಾಸ್ : ಮಕ್ಕಳ ಸಾಧನೆಯನ್ನು ಕೊಂಡಾಡಿದ , ಅಧ್ಯಕ್ಷ ಸುಮಂತ್ ಕುಮಾರ್ ಜೈನ್:

 

 

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 593 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಪಡೆದು, ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಹಲವರು ಸಾಧನೆ ಮಾಡಿದ್ದಾರೆ. 594 ಅಂಕ ಪಡೆದ ಪ್ರತೀಕ್ಷಾ ಎಸ್‌.ರಾಜ್ಯಕ್ಕೆ 6ನೇ ಸ್ಥಾನ, 592 ಅಂಕ ಪಡೆದ ಕೃಪಾ ಸಾಂಚಿ ಮೌರ್ಯ 8ನೇ, 591 ಅಂಕಗಳನ್ನು ಪಡೆದ ಹೇಮಂತ್‌ ಎಸ್‌.ಜೆ. 9 ನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ಬರೆದ 1015 ವಿದ್ಯಾರ್ಥಿಗಳಲ್ಲಿ 593 ಡಿಸ್ಟಿಂಕ್ಷನ್‌ 422 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸುಮಂತ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

 

 

 

ಕಳೆದ ಬಾರಿ 597 ಅಂಕಗಳ ಜತೆಗೆ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರು. ರಾಜ್ಯದ ಟಾಪ್‌ಟೆನ್‌ನಲ್ಲಿ ಎಕ್ಸೆಲ್‌ನ 9 ವಿದ್ಯಾರ್ಥಿಗಳಿದ್ದರು. ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ಪ್ರಣವ್‌ ಪೊನ್ನಣ್ಣ ಶೇ.99.58, ಮೊಹಮ್ಮದ್‌ ಆಯಾನ್‌ ಶೇ.99.23, ನಿಶಾಂತ್‌ ಜೈನ್‌ ಶೇ.99.21, ನಾಗಣ್ಣ ಗೌಡ ಶೇ.99.15 ಪರ್ಸಂಟೇಲ್‌ ನೊಂದಿಗೆ ಅತ್ಯುತ್ತಮ ಸಾಧನೆ ತೋರಿದ್ದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿಇಟಿ ಯಲ್ಲಿ 17 ವಿದ್ಯಾರ್ಥಿಗಳು 1000 ದ ಒಳಗೆ ರ್‍ಯಾಂಕ್‌, 48 ವಿದ್ಯಾರ್ಥಿಗಳು 2000ದ ಒಳಗೆ ರ್‍ಯಾಂಕ್‌ ಪಡೆದಿದ್ದರು. ನೀಟ್‌ ಪರೀಕ್ಷೆಯಲ್ಲಿ 720 ರಲ್ಲಿ 710 ಅಂಕಗಳನ್ನು ಪಡೆದು ಪ್ರಜ್ವಲ್‌ ಎಚ್‌.ಎಂ. ರಾಜ್ಯಕ್ಕೆ ಗೌರವವನ್ನು ತಂದಿದ್ದರು. ಒಟ್ಟು ನಾಲ್ಕು ವಿದ್ಯಾರ್ಥಿಗಳು ಏಮ್ಸ್‌ ಗೆ ಆಯ್ಕೆಯಾಗಿದ್ದರು. ಹಲವು ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಲ್ಲಿ ಸ್ಥಾನ ಪಡೆದು ರಾಜ್ಯದ ಶೈಕ್ಷಣಿಕ ವಲಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಪ್ರತಿ ವರ್ಷ ಎಕ್ಸೆಲ್‌ ಕಾಲೇಜಿನಿಂದ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎಂ.ಬಿ. ಬಿ.ಎಸ್‌ಗೆ ಆಯ್ಕೆಯಾಗುತ್ತಾ ಬಂದಿದ್ದಾರೆ, ರಾಜ್ಯದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸುತ್ತಿರುವ ಕೀರ್ತಿ ನಮ್ಮ ಕಾಲೇಜಿನದ್ದು. ಎನ್‌ಡಿಎ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಡಾ| ನವೀನ್‌ ಮರಿಕೆ, ಪಾಲಕರು, ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬಂದಿ ಹಾಗೂ ಹೆತ್ತವರು ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸೆಲ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೀಟ್‌, ಸಿಇಟಿ, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರವಾಗಿ ಸಾಧನೆ ಮಾಡುವುದರ ಜತೆಗೆ ಬೋರ್ಡ್‌ ಪರೀಕ್ಷೆಯಲ್ಲೂ ಅತ್ಯುನ್ನತ ಫಲಿತಾಂಶ ಪಡೆದಿರುವುದು ಸಂತೋಷ ತಂದಿದೆ.ಎಂದು ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.

error: Content is protected !!