ಬೆಳ್ತಂಗಡಿ: ಅಕ್ರಮವಾಗಿ ಪಿಕಪ್ ವಾಹನದಲ್ಲಿ ಸಾಗಿಸುತಿದ್ದ 15 ಗೋವುಗಳನ್ನು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರಕ್ಷಿಸಿದ್ದಾರೆ.
ಎ 06 ರಂದು ಸೌಜನ್ಯ ನ್ಯಾಯಕ್ಕಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು. ಈ ಬಗ್ಗೆ ಗುರುವಾರ ತಡ ರಾತ್ರಿ ಗುರುವಾಯನಕರೆ ಬಳಿ ಭಿತ್ತಿಪತ್ರ ಅಂಟಿಸುತ್ತಿರುವ ವೇಳೆ ಸಂಶಯಾಸ್ಪದವಾಗಿ ಟರ್ಪಲ್ ಮುಚ್ಚಿದ ರೀತಿಯಲ್ಲಿ ಗೂಡ್ಸ್ ವಾಹನ ಉಪ್ಪಿನಂಗಡಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ಗಮನಿಸಿ ಬೆನ್ನಟ್ಟಿದ ಕಾರ್ಯಕರ್ತರು ಜಾರಿಗೆ ಬೈಲು ಎಂಬಲ್ಲಿ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 15 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಗೋವುಗಳನ್ನು ರಕ್ಷಿಸಿದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.