ಬೆಳ್ತಂಗಡಿ, ಪ್ರಸಕ್ತ ಸಾಲಿನ ತೆರಿಗೆ ಪಾವತಿದಾರರಿಗೆ ಶೇ 5 ರಿಯಾಯಿತಿ:

 

 

 

ಬೆಳ್ತಂಗಡಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ ದರ ಮತ್ತು ಫೀಸುಗಳು) ನಿಯಮಗಳು 2021ರಂತೆ ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆಯನ್ನು ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿಯನ್ನು ನೀಡಲಾಗಿರುತ್ತದೆ.

 

 

 

 

ಅದರಂತೆ, 2025-26ನೇ ಸಾಲಿನ ತೆರಿಗೆಗಳನ್ನು 2025ರ ಜೂನ್ ತಿಂಗಳ 30ರೊಳಗೆ ಸಂಪೂರ್ಣವಾಗಿ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿ ದೊರಕಲಿದ್ದು, ತಾಲೂಕಿನ ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿನಲ್ಲಿ ಪಾವತಿಸಿ ತೆರಿಗೆ ವಿನಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!