ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡ 103 ವರ್ಷದ ಪಾರ್ವತಮ್ಮ: ದೇಶದ ಸೈನಿಕರ ಸುಖ-ಶಾಂತಿಗಾಗಿ ಅಜ್ಜಿಯ ಕಾಲ್ನಡಿಗೆ: ಪ್ರಧಾನಿ ಮೋದಿಗಾಗಿಯೂ 18 ಕಿಲೋಮೀಟರ್ ಕ್ರಮಿಸಿದ್ದ ಹಿರಿತಾಯಿ..!

ಬೆಳ್ತಂಗಡಿ : ತನಗಾಗಿ, ತನ್ನ ಕುಟುಂಬದ ಶ್ರೇಯಸ್ಸಿಗಾಗಿ ಕಿ.ಮೀಗಟ್ಟಲೆ ಪಾದಯಾತ್ರೆ ಕೈಗೊಳ್ಳುವವರು ಇದ್ದಾರೆ. ಆದ್ರೆ ಇಲ್ಲೊಂದು ಹಿರಿ ಜೀವ ದೇಶದ ಸೈನಿಕರ ಸುಖ-ಶಾಂತಿಯಿಗಾಗಿ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ಮೂಲದ 103 ವರ್ಷದ ಪಾರ್ವತಮ್ಮ ಎಕ್ಸ ಅಜ್ಜಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಆಶ್ಚರ್ಯಗೊಂಡಿದ್ದಾರೆ. ಅಜ್ಜಿಯ ದೈವಭಕ್ತಿ, ದೇಶಭಕ್ತಿಗೆ ಜನ ಶಿರಬಾಗಿದ್ದಾರೆ.

ಯೋಧರು ತಮ್ಮ ಕುಟುಂಬ ಮತ್ತು ಬಂಧು-ಬಳಗವನ್ನು ಬಿಟ್ಟು ದೇಶದ ರಕ್ಷಣೆಗೆ ಜೀವ ಮೀಸಲಾಗಿಸುವುದರಿಂದ, ಅವರ ಒಳಿತಿಗಾಗಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ಪಾರ್ವತಮ್ಮ ಈ ಪಾದಯಾತ್ರೆಯನ್ನು ಆರಂಭಿಸಿದ್ದಾರೆ.

ಪ್ರಧಾನಿ ಮೋದಿಗಾಗಿಯೂ 18 ಕಿಲೋಮೀಟರ್ ಕ್ರಮಿಸಿದ್ದ ಹಿರಿತಾಯಿ..!
ಪಾರ್ವತಮ್ಮ ಅವರು 102 ವರ್ಷದ ವಯಸ್ಸಿನಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ 18 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದರು. ಕಳೆದ ಬಾರಿ ಅವರು ನರೇಂದ್ರ ಮೋದಿಯವರ ಮತ್ತೊಮ್ಮೆ ಪ್ರಧಾನಿಯಾಗುವ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿರುವ ಕಾನೂನುಗಳು ಎಲ್ಲಾ ರಾಜ್ಯಗಳಲ್ಲಿ ಜಾರಿಯಾಗಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!