ತಿರುವನಂತಪುರ : ಒಂದೇ ಕುಟುಂಬದ 6 ಮಂದಿಯನ್ನು 23 ವರ್ಷದ ಯುವಕನೋರ್ವ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.
ಆರೋಪಿ, 13 ವರ್ಷದ ಸಹೋದರ ಅಹಸನ್, ಅಜ್ಜಿ ಸಲ್ಮಾ ಬೀವಿ, ತಂದೆಯ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಅವನ ಗೆಳತಿ ಫರ್ಶಾನಾ ಅವರನ್ನು ಹತ್ಯೆಗೈದಿದ್ದಾನೆ. ಆರೋಪಿ ಅಫಾನ್ ಅವರ ತಾಯಿ ಗಂಭೀರ ಸ್ಥಿತಿಯಲ್ಲಿದ್ದು, ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರು ವಿಭಿನ್ನ ಸ್ಥಳಗಳಲ್ಲಿ ಕೊಲೆಗಳು ನಡೆದಿದ್ದು, ಆರೋಪಿ ಅಫಾನ್ ಪೊಲೀಸ್ ಠಾಣೆಯಲ್ಲಿ ಶರಣಾಗಿ ಘಟನೆಗಳನ್ನು ವಿವರಿಸಿದ್ದಾನೆ. ಆರೋಪಿಯು ತಾನು ವಿಷ ಸೇವಿಸಿದ್ದೇನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಪೊಲೀಸರು, ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಕುಟುಂಬದ ಐವರನ್ನು ಕೊಲ್ಲಲು ಅಫಾನ್ ಸುತ್ತಿಗೆಯನ್ನು ಬಳಸಿದ್ದಾನೆ. ಮನೆಯಲ್ಲಿ ಯಾವುದೇ ಕಳ್ಳತನದ ಕೆಲಸಗಳು ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಸುತ್ತಿಗೆ ಹಿಡಿದಿದ್ದ ಅಫಾನ್, ಹಣಕ್ಕಾಗಿ ರೂಮ್ನಲ್ಲಿದ್ದ ವಾರ್ಡ್ರೋಬ್ನ ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದಾನೆ. ಮಾದಕ ವ್ಯಸನಿಯಾಗಿದ್ದ ಅಫಾನ್, ಐವರನ್ನು ಹತ್ಯೆಗೈಯುವ ಮುನ್ನ ನಶೆಯಲ್ಲಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ