ದೇಶದಲ್ಲಿ ಮತ್ತೊಂದು ಹೇಯ ಕೃತ್ಯ!: ಆರ್ಕೆಸ್ಟ್ರಾ ನರ್ತಕಿ ಮೇಲೆ 6 ಮಂದಿಯಿಂದ ಗ್ಯಾಂಗ್ ರೇಪ್!

ಸಾಂದರ್ಭಿಕ ಚಿತ್ರ

ಆರ್ಕೆಸ್ಟ್ರಾ ನರ್ತಕಿ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದ ಹೇಯ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದೆ.

ಸಿಂಗ್ರೌಲಿ ಜಿಲ್ಲೆಯ ಮಾಡಾ ಪೊಲೀಸ್ ಠಾಣೆ ಪ್ರದೇಶದ ಶಿತುಲ್ ಗ್ರಾಮದಲ್ಲಿ ವಾಸಿಸುವ ದೇವ್ ಕುಮಾರ್ ಶಾ ಅವರ ಮನೆಯಲ್ಲಿ ಬರ್ಹೋ ಸಂಸ್ಕಾರ ಕಾರ್ಯಕ್ರಮವಿತ್ತು. ಅದಕ್ಕಾಗಿ ಸರಾಯ್ ಪ್ರದೇಶದಿಂದ ಆರ್ಕೆಸ್ಟ್ರಾ  ತಂಡವನ್ನು ಕರೆಸಲಾಗಿತ್ತು. ಆರ್ಕೆಸ್ಟ್ರಾದಲ್ಲಿ ಗಾಯಕರ ಜೊತೆಗೆ ನರ್ತಕಿಯರೂ ಇದ್ದರು. ಕಾರ್ಯಕ್ರಮ ತಡರಾತ್ರಿ ಮುಗಿದ ನಂತರ, ಆರ್ಕೆಸ್ಟ್ರಾದ ಎಲ್ಲಾ ಸದಸ್ಯರು ಬೇರೆ ಬೇರೆ ಬೈಕ್‌ಗಳಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ, ಬೇರೆ ಬೈಕ್‌ಗಳಲ್ಲಿ ಬಂದ ಕೆಲವು ದುಷ್ಕರ್ಮಿಗಳು ಆರ್ಕೆಸ್ಟ್ರಾ ನರ್ತಕಿ ಇದ್ದ ಬೈಕ್ ನ್ನು ತಡೆದು ನಿಲ್ಲಿಸಿದ್ದಾರೆ.

ಹುಡುಗಿಯನ್ನು ರಕ್ಷಿಸಲು ಬಂದ ಆಕೆಯ ಸ್ನೇಹಿತನನ್ನು ದುಷ್ಕರ್ಮಿಗಳು ಥಳಿಸಿ, ಬಳಿಕ ನರ್ತಕಿಯನ್ನು ಕಾಡಿಗೆ ಕರೆದೊಯ್ದು, ಎಲ್ಲಾ 6 ಆರೋಪಿಗಳು ರಾತ್ರಿಯಿಡೀ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ, ಆರೋಪಿಗಳು ಆಕೆಯನ್ನು ಕಾಡಿನಲ್ಲಿ ಬಿಟ್ಟು ಓಡಿಹೋಗಿದ್ದಾರೆ.

ಸಂತ್ರಸ್ತೆ ಬೆಳಿಗ್ಗೆ ತನ್ನ ಮನೆಗೆ ತಲುಪಿ ತನ್ನ ಅಕ್ಕನಿಗೆ ನಡೆದ ಘಟನೆಯನ್ನೆಲ್ಲಾ ತಿಳಿಸಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು 6 ಆರೋಪಿಗಳನ್ನು ಬಂಧಿಸಲಾಗಿದೆ.

error: Content is protected !!