ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ರಾಷ್ಟ್ರೀಯ ಹೆದ್ದಾರಿಯ ಬಳಿ ಸಂಭವಿಸಿದೆ.
ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ (40 ವರ್ಷ), ನೀಲಮ್ಮ( 62 ವರ್ಷ) ಲಕ್ಷ್ಮಿ (57 ವರ್ಷ) ಕಲಾವತಿ (60 ವರ್ಷ) ಸಂತೋಷ (45 ವರ್ಷ) ಮೃತ ದುರ್ದೈವಿಗಳು.
ಬೀದರ್‌ನ ಲಾಡಗೆರಿ ನಗರ ನಿವಾಸಿಗಳಾದ 14 ಜನ ಫೆಬ್ರವರಿ 18 ರಂದು ಮಧ್ಯಾಹ್ನ ಬೀದರ ನಗರದಿಂದ ಕ್ರೂಸರ್ ಮಹಾಕುಂಭ ಪ್ರಯಾಗರಾಜಗೆ ಹೋಗಿದ್ದಾರೆ. ಶುಕ್ರವಾರ (ಫೆ.21) ಬೆಳಗಿನ ಜಾವ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.