ಬೆಳ್ತಂಗಡಿ:ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಇಂದು ಸಂಜೆ ಬೆಳ್ತಂಗಡಿಯಲ್ಲಿ ನಡೆದಿದೆ.
ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆ ಸಮೀಪದ ನೂಜೆಲು ನಿವಾಸಿ ಯಶೋಧರ್ (49) ಅವರಿಗೆ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ತಕ್ಷಣ ಮಂಗಳೂರಿಗೆ ತೆರಳುವಂತೆ ವೈದ್ಯರು ತಿಳಿಸಿದ್ದು ಕಾರಿನಲ್ಲಿ ಮಂಗಳೂರಿಗೆ ತೆರಳುವ ವೇಳೆ ಹಳೇಕೋಟೆ ಬಳಿ ನೋವು ಮತ್ತೆ ಉಲ್ಬಣಗೊಂಡು ಅಸ್ವಸ್ಥಗೊಂಡಿದ್ದು ಮತ್ತೆ ಬೆಳ್ತಂಗಡಿ ಆಸ್ಪತ್ರೆ ಕರೆದುಕೊಂಡು ಬಂದಾಗ ಅಷ್ಟೊತ್ತಿಗಾಗಲೇ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಯಶೋದರ್ ಅವರು ಹಲವಾರು ವರ್ಷಗಳಿಂದ ಪೈಂಟ್ ವೃತ್ತಿ ಮಾಡುತಿದ್ದರು.ಅವರು ಪತ್ನಿ ,ಪುತ್ರಿ ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.