ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ ಸಿಟಿ ರವಿಗೆ ಬಿಗ್ ಶಾಕ್!: ವಾಯ್ಸ್ ಸ್ಯಾಂಪಲ್ ನೀಡುವಂತೆ ಹೈ ಕೋರ್ಟ್ ಸೂಚನೆ: ಸಿಟಿ ರವಿ ಪರ ವಕೀಲರಿಗೆ ಖಡಕ್ ವಾರ್ನಿಂಗ್..!

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ ಆರೋಪದಲ್ಲಿ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ ಸಿಟಿ ರವಿಗೆ ಹೈ ಕೋರ್ಟ್ ಬಿಗ್ ಶಾಕ್ ನೀಡಿದೆ.

ಅವಾಚ್ಯ ಶಬ್ದ ಬಳಸಿರುವುದು ತನಿಖೆಯಲ್ಲಿ ದೃಢವಾದ ಬೆನ್ನಲ್ಲೆ ವಾಯ್ಸ್ ಸ್ಯಾಂಪಲ್ ನೀಡುವಂತೆ ಸಿಐಡಿ ಸಿಟಿ ರವಿಗೆ ತಿಳಿಸಿದೆ. ಆದರೆ ಅವರು, ತಾವು ಅವಾಚ್ಯ ಶಬ್ದ ಬಳಸಿಲ್ಲ ಎಂದು ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಸಿಐಡಿ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ಇಂದು (ಜನವರಿ 17) ಸಿಟಿ ರವಿ ಪರ ವಕೀಲರು ಕೋರ್ಟ್ ಗೆ ಹಾಜರಾಗಿದ್ದು, ಈ ವೇಳೆ, “ನಿಮಗೆ ಅಕ್ಷೇಪಣೆ ಇದ್ದರೆ ಸಲ್ಲಿಸಿ. ಇಲ್ಲ ಆದೇಶ ಮಾಡುತ್ತೇನೆ. ಹೋಗಿ ವಾಯ್ಸ್ ಸ್ಯಾಂಪಲ್ ನೀಡಿ. ವಾಟ್ಸಪ್‌ನಲ್ಲಿ ನೊಟೀಸ್ ಬಂದಿದೆ ಎನ್ನುತ್ತೀರಿ. ನೀವು ಹೇಗೆ ಹಾಜರಾಗಿದ್ದೀರಿ? ನಾಳೆ ನೀವು ತಿಳಸಬೇಕು. ಇಲ್ಲ ಆದೇಶ ಮಾಡಲಾಗುತ್ತೆ” ಎಂದು ಕೋರ್ಟ್ ಸಿಟಿ ರವಿ ಪರ ವಕೀಲರಿಗೆ ಖಡಕ್ ಆಗಿ ಹೇಳಿದೆ.

ಬಳಿಕ ಸಿಟಿ ರವಿ ಪರ ವಕೀಲರು, ದಯವಿಟ್ಟು ಬೇರೆ ದಿನ ಕೊಡಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಕೋರ್ಟ್, ಯಾಕೆ ನಿಮಗೆ ಬೇರೆ ದಿನ ಬೇಕು ಎಂದು ಪ್ರಶ್ನಿಸಿದೆ. ಇದಕ್ಕೆ ನಮಗೆ ಇನ್ನೂ ಫೈಲ್ ಸಿಕ್ಕಿಲ್ಲ ಎಂದು ಸಿಟಿ ರವಿ ಪರ ವಕೀಲರು ತಿಳಿಸಿದರು. ನಂತರ ಕೋರ್ಟ್, ಇಂದೇ ಅವರಿಗೆ(ಸಿಟಿ ರವಿ ಪರ ವಕೀಲರಿಹ) ಕಾಪಿ ಕೊಡಿ ಎಂದು ಸಿಐಡಿ ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದರು. ಬೇಕಿದ್ರೆ ವಾಯ್ಸ್ ಸ್ಯಾಂಪಲ್ ಕೊಡಿ. ವಿಚಾರಣೆಗೆ ದಿನಾಂಕ ಐಓ ಹತ್ತಿರ ಕೇಳಿಕೊಳ್ಳಿ ಎಂದರು.

ಹೀಗಾಗಿ ಇದೀಗ ಸಿಟಿ ರವಿ ತಮ್ಮ ವಾಯ್ಸ್ ಸ್ಯಾಂಪಲ್ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

error: Content is protected !!