ಚಿಕ್ಕಮಗಳೂರು: ಬಿಜೆಪಿ ನಾಯಕ ಸಿ.ಟಿ ರವಿ ಅವರ ಪರ ಬಿಜೆಪಿ ಕಾರ್ಯಕರ್ತರುಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬಿಳುಗುಳದ ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಬೆದರಿಕೆ ಪತ್ರ ಬರೆದವರಿಗೆ, ಸುಳ್ಳು ಆರೋಪ, ವೈಯಕ್ತಿಕ ಟಾರ್ಗೆಟ್, ಪಿತೂರಿ ಮಾಡಿದವರಿಗೆ ಒಳ್ಳೆಯ ಬುದ್ದಿ ನೀಡಲೆಂದು ಪ್ರಾರ್ಥಿಸಿದ್ದಾರೆ.