“ಕಾಂತಾರ 1′ ಸಿನಿಮಾದ ಕೆಲಸಗಳ ಜೊತೆಗೆ ಹೊಸ ಸಿನಿಮಾಗಳ ಘೋಷಣೆ ಮೂಲಕ ಸದಾ ಸುದ್ದಿಯಲ್ಲಿರುವ ನಟ ರಿಷಬ್ ಶೆಟ್ಟಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಪತ್ನಿ ಪ್ರಗತಿ ಹಾಗೂ ಮಕ್ಕಳ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೊಸ ಅವತಾರ ವೈರಲ್ ಆಗಿದೆ.
ಇಲ್ಲಿ ತನಕ ಅವರು ತಮ್ಮ ಉದ್ದದ ಕೂದಲನ್ನು ಕಟ್ಟುತ್ತಿದ್ದರು. ಆದರೆ ಹೊಸ ಲುಕ್‌ನಲ್ಲಿ ಕೂದಲನ್ನು ಹಾಗೇ ಬಿಟ್ಟಿದ್ದು ಹೊಸ ಲುಕ್ ನೀಡಿದೆ.
ತೆಲುಗಿನ “ಜೈ ಹನುಮಾನ್’ ಹಾಗೂ ಹಿಂದಿಯ “ಛತ್ರಪತಿ ಶಿವಾಜಿ’ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ಕೂದಲನ್ನು ಬಿಟ್ಟಿದ್ದಾರೆ.