ಬಾಲಕನ ತಲೆಯ ಮೇಲೆ ಹರಿದ ಟ್ರಕ್..!: ಹುಟ್ಟುಹಬ್ಬದ ದಿನವೇ ದುರ್ಮರಣ..!

ಬೆಂಗಳೂರು: ದ್ವಿಚಕ್ರವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಹುಟ್ಟುಹಬ್ಬದ ದಿನವೇ 12 ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

ಆಂಧ್ರ ಪ್ರದೇಶದ ಆಂಧ್ರ ಪ್ರದೇಶ ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವೇದ ಕಲಿಯಲು ಕಳೆದ 1 ತಿಂಗಳ ಹಿಂದೆ ಬಂದಿದ್ದ. ಶನಿವಾರ ಭಾನುತೇಜನ ಹುಟ್ಟುಹಬ್ಬವಾಗಿತ್ತು. ಹೀಗಾಗಿ ಹುಟ್ಟುಹಬ್ಬ ಆಚರಿಸಲು ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಸೋಹದರ ಚಕ್ರಧರಣ್ ಜೊತೆ ಬೈಕ್‌ನಲ್ಲಿ ಹೋಗಿ ವಾಪಾಸ್ಸಾಗುತ್ತಿದ್ದ ವೇಳೆ ಐಚರ್ ಟ್ರಕ್ ಹಿಂಬದಿಯಿಂದ ಇವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ಭಾನುತೇಜ್ ಕೆಳಗೆ ಬಿದ್ದಿದ್ದು, ಇದೇ ವೇಳೆ ಬಾಲಕ ತಲೆಯ ಮೇಲೆ ಟ್ರಕ್‌ನ ಎರಡು ಚಕ್ರಗಳು ಹರಿದಿವೆ. ಗಂಭೀರವಾಗಿ ಗಾಯಗೊಂಡ ಭಾನು ತೇಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಚಕ್ರ  ಧರಣ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಸಣ್ಣ ವಯಸ್ಸಿನಲ್ಲಿ ಭಾನು ತೇಜನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!