ಬೆಳ್ತಂಗಡಿ : ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವೇಣೂರು ಪೊಲೀಸ್ ಠಾಣೆಯಲ್ಲಿ 2024 ರಲ್ಲಿ ದಾಖಲಾಗಿದ್ದ ಕಲಂ: 109 BNS -2023 (ಕೊಲೆ ಯತ್ನ) ಪ್ರಕರಣದಲ್ಲಿ ಮೂಡಬಿದ್ರೆ ತಾಲೂಕಿನ ಪುತ್ತಿಗೆ ಗ್ರಾಮದ ರಮಲ್ತ್ ಮಂಜಿಲ್ ಮನೆ ಹಂಡೇಲು ಉಮ್ಮಾರಬ್ಬ ಮಗನಾದ ಮಹಮದ್ ಇಕ್ಬಾಲ್ (27) ತಲೆಮರೆಸಿಕೊಂಡಿದ್ದ.
ಜ.09 ರಂದು ವೇಣೂರು ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಶೈಲ ಮತ್ತು ಸಬ್ ಇನ್ಸ್ ಪೆಕ್ಟರ್ ಆನಂದ ನೇತೃತ್ವದ ಪೊಲೀಸರ ತಂಡ ಬಂಧಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಿದೆ.