ಸಾಂದರ್ಭಿಕ ಚಿತ್ರ
ಮಂಗಳೂರು: ರಿವಾಲ್ವರ್ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಜೆ ನಗರ ಹೊರವಲಯದ ವಾಮಂಜೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ಅಂಗಡಿಯೊಂದಕ್ಕೆ ಬಂದಿದ್ದ ಗ್ರಾಹಕರು ಇಟ್ಟಿದ್ದ ರಿವಾಲ್ವರ್ ನ್ನು ಸಫ್ವಾನ್ ಪರೀಕ್ಷಿಸುತ್ತಿದ್ದಾಗ ಅದರಲ್ಲಿದ್ದ ಗುಂಡು ಆಕಸ್ಮಿಕವಾಗಿ ಸಿಡಿದಿದೆ ಎನ್ನಲಾಗಿದೆ. ಇದರಿಂದ ಸಫ್ವಾನ್ ರ ಹೊಟ್ಟೆಗೆ ಗುಂಡು ತಗುಲಿ ಗಾಯವಾಗಿದೆ. ಇದೊಂದು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.