ಸಚಿವ ಈಶ್ವರ್ ಖಂಡ್ರೆ ಕುಟುಂಬ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕುಟುಂಬ ಸಮೇತರಾಗಿ ಇಂದು (ಡಿ.23) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಈಶ್ವರ್ ಖಂಡ್ರೆ ಅವರ ಪತ್ನಿ ಗೀತಾ ಖಂಡ್ರೆ, ಮಗ ಬಿದರ್ ಸಂಸದ ಸಾಗರ್ ಖಂಡ್ರೆ ಹಾಗೂ ಪತ್ನಿ ಗೀತಾ ಖಂಡ್ರೆ ಸಹೋದರರಾದ ಹೈಕೋರ್ಟ್ ಎಸ್.ಪಿ.ಪಿ ವಿಜಯ ಕುಮಾರ್ ಮಜ್ಜಿಗೆ ಹಾಗೂ ವಕೀಲ ಗಂಗಾಧರ್ ಮಜ್ಜಿಗೆ, ಕಾಂಗ್ರೆಸ್ ಎಸ್ ಸಿ ಮೋರ್ಚಾದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸ್ವಾಮಿ ಭೇಟಿ ನೀಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈಶ್ವರ್ ಖಂಡ್ರೆ ಮತ್ತು ಮಗ ಸಾಗರ್ ಖಂಡ್ರೆ ಬೆಲ್ಲ ಮತ್ತು ಕಡ್ಲೆಬೆಳೆಯಿಂದ ತುಲಾ ಭಾರ ಸೇವೆ ಮಾಡಿಸಿ, ಬಳಿಕ ಡಾ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಂಗಳೂರು ಡಿಸಿಎಫ್ ಮರಿಯಪ್ಪ ಕರಿಕಳನ್, ಅರಣ್ಯ ಇಲಾಖೆಯ ಮಂಗಳೂರು ಡಿಸಿಎಫ್ ಶ್ರೀಕಾಂತ್ ಖಣದಾಳಿ, ಬೆಳ್ತಂಗಡಿ ಆರ್.ಎಫ್.ಓ ತ್ಯಾಗರಾಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಮತ್ತಿತರ ಕಾರ್ಯಕರ್ತರು ಜೊತೆಗಿದ್ದರು.

error: Content is protected !!