ಬೆಳ್ತಂಗಡಿ: ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಡಿ.20ರಂದು ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮ ಸಾಂತೋಮ್ ಟವರ್ ನಲ್ಲಿ ನಡೆಯಿತು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ. ರವರು ಪ್ರಾಸ್ತಾವಿಕ ಮಾತನಾಡಿ ಮಾಧ್ಯಮ ಮಿತ್ರರು ಸಂಸ್ಥೆಯ ಕಾರ್ಯಕ್ರಮಕ್ಕೆ ನೀಡುವ ಸಹಕಾರಕ್ಕೆ ಸ್ಮರಿಸಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಚೈತ್ರೇಶ್ ಇಳಂತಿಲ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮೀಡಿಯಾ ಕ್ಲಬ್ ಅಧ್ಯಕ್ಷರಾದ ಬಾಲಕೃಷ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯಾ ಅಪೋಸ್ತಲೇಟ್ ನಿರ್ದೇಶಕರಾದ ವಂದನೀಯ ಫಾ. ಮ್ಯಾಥ್ಯೂ ತಾಯೇಕ್ಕಾಟ್ಟೀಲ್ ಕ್ರಿಸ್ಮಸ್ ಕೇಕ್ ಕತ್ತರಿಸಿ, ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿದರು.
ಸಂಯೋಜಕಿ ಕು. ಶ್ರೇಯಾ ಪ್ರಾರ್ಥಿಸಿ, ಸಂಸ್ಥೆಯ ಸಂಯೋಜಕರಾದ ಸುನಿಲ್ ಗೊನ್ಸಾಲ್ವಿಸ್ ಎಲ್ಲರನ್ನು ಸ್ವಾಗತಿಸಿದರು. ಜಿನಿ ಪಿ.ಜೆ. ವಂದಿಸಿ, ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ’ಸೋಜರವರು ಕಾರ್ಯಕ್ರಮ ನಿರೂಪಿಸಿದರು.