“ಗೋ ವಧೆ ಮಾಫಿಯಾದವರನ್ನು ಮಟ್ಟಹಾಕಿ ಆರೋಪಿಗಳನ್ನು ಜೈಲಿಗಟ್ಟಿ: ಧರ್ಮಸ್ಥಳ ಸ್ನಾನಘಟ್ಟವನ್ನು ಅಪವಿತ್ರ ಮಾಡುವ ಹುನ್ನಾರವಿದು: ಗೋವದೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು”: ವಿ.ಹಿಂಪ ಆಗ್ರಹ

ಬೆಳ್ತಂಗಡಿ: ಚಾರ್ಮಾಡಿಯ ಅನಾರು ಎಂಬಲ್ಲಿ ಮೃತ್ಯುಂಜಯ ನದಿಯಲ್ಲಿ ದನದ ತಲೆ ಚರ್ಮ ಇತ್ಯಾದಿ ತ್ಯಾಜ್ಯಗಳನ್ನು ತುಂಬಿಸಿದ ಹಲವು ಗೋಣಿಚೀಲಗಳು ಡಿ.17ರಂದು ಪತ್ತೆಯಾಗಿದ್ದು ಈ ಕುರಿತು ವಿಶ್ವ ಹಿಂದೂ ಪರಿಷತ್ ಆಕ್ರೋಶ ವ್ಯಕ್ತಪಡಿಸಿದೆ.

ಡಿ.18ರಂದು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ನಮಗೆ ಸಿಕ್ಕಿದ ಮಾಹಿತಿಯಂತೆ ಚಾರ್ಮಾಡಿಯ ಆಸುಪಾಸಿನಲ್ಲಿ ಈ ಕಾಯ್ದೆ ಉಲ್ಲಂಘಿಸಿ ಗೋಮಾಂಸ ಮಾಡುವ ಬೃಹತ್ ಮಾಫಿಯಾ ಕಾರ್ಯವಸ ಗೊತ್ತಿದ್ದು ಆಸುಪಾಸಿನಲ್ಲಿ ಅಕ್ರಮ ಕಸಾಯಿ ಖಾನಗಳಲ್ಲಿ ಗೋವದೆ ಮಾಡಿ ಗೋಮಾಂಸವನ್ನ ಬೆಳ್ತಂಗಡಿ ಪುತ್ತೂರು ಮಂಗಳೂರು ಕಡೆ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಕಸಾಯಿ ಖಾನೆಗೆ ಗೋವುಗಳ ಅಕ್ರಮ ಸಾಗಾಟ,ಅಕ್ರಮ ವಧೆ,ಗೋಮಾಂಸ ಸಾಗಾಟ ಗೋಮಾಂಸ ಮಾರಾಟ ಎಲ್ಲವನ್ನು ನಿಲ್ಲಿಸಲು ಕಾನೂನಿನಲ್ಲಿ ಅವಕಾಶ ಇದ್ದು ಪೊಲೀಸ್ ಇಲಾಖೆಯ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಜಾರಿಯಲ್ಲಿದ್ದು ಗೋ ಹತ್ಯೆಗೆ ಏಳು ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿವರೆಗೆ ದಂಡ ಇದೆ. ಸಾಧ್ಯ ಇರುವ ಎಲ್ಲಾ ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿ ಅಕ್ರಮ ಸಾಗಾಟ, ವಧಸ್ಥಳ, ಗೋಮಾಂಸ ಸಾಗಾಟ ಮಾರಾಟಗಳನ್ನು ನಿಲ್ಲಿಸಲು ವಿಶೇಷ ಪೊಲೀಸ್ ಪಡೆ ರಚಿಸಬೇಕು. ಇದರ ಹಿಂದೆ ದೊಡ್ಡ ಮಾಫಿಯಾ ಇದ್ದು ಮಾಫಿಯಾದ ಜನರನ್ನು ಹಿಡಿದು ಜೈಲಿಗಟ್ಟಬೇಕು. ವಧೆ ಮಾಡಿದ ಸ್ಥಳ ಗೋಸಾಗಾಟ ಮಾಡಿದ ವಾಹನಗಳನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕು. ಆರೋಪಿಗಳನ್ನು ಸ್ಟೇಷನ್ ಜಾಮಿನಲ್ಲಿ ಬಿಡದೆ ಪೊಲೀಸ್ ಕಸ್ಟಡಿಗೆ “ತೆಗೆದುಕೊಂಡು ಮಾಂಸ ಎಲ್ಲೆಲ್ಲಿ ಮಾರಾಟವಾಗುತ್ತಿದೆ, ಗೋಗಳನ್ನು ಎಲ್ಲಿಂದ ತರಲಾಗಿದೆ” ಎಂಬಿತ್ಯಾದಿ ಬಗ್ಗೆ ಸರಿಯಾಗಿ ವಿಚಾರಿಣೆ ನಡೆಸಿ ಗೋವದೆ ಪೂರ್ತಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹೊಳೆಗೆ ಗೋಮಾಂಸ ತ್ಯಾಜ್ಯಗಳನ್ನು ಹಾಕಿದರೆ ಅದು ಧರ್ಮಸ್ಥಳದ ಸ್ನಾನಘಟ್ಟ ಕ್ಕೆ ಬರುವುದರಿಂದ ಅಲ್ಲಿ ಸಾವಿರಾರು ಶ್ರದ್ದಾಳು ಹಿಂದುಗಳು ಪವಿತ್ರ ಸ್ಥಾನ ಮಾಡುವಾಗ ನೀರನ್ನು ಅಪವಿತ್ರ ಗೊಳಿಸುವ ಹೊನ್ನಾರ ಇದು ಆಗಿರಬೇಕೆಂದು ಕಾಣುತ್ತಿದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಸ್ನಾನಘಟ್ಟ ಅಪವಿತ್ರವಾಗದಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಎಲ್ಲಾ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಕುಮಾರ್ ಬೆಳ್ತಂಗಡಿ, ಭಜರಂಗ ದಳ ಸಂಚಾಲಕ ಸಂತೋಷ್ ಅತ್ತಾಜೆ, ಗೋರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

error: Content is protected !!