ಉದ್ಯಮಿ ಶಶಿಧರ ಶೆಟ್ಟಿಯವರಿಗೆ “ಬಂಟೆರ್ನ ರತ್ನ” ಪ್ರಶಸ್ತಿ: ಅಹಮದಾಬಾದ್ ಬಂಟರ ಸಂಘದಿಂದ ಗೌರವ:

 

 

ಬೆಳ್ತಂಗಡಿ: ಜನಮಾನಸದಲ್ಲಿ ಸರಳತೆಯ ಮೂರ್ತಿಯಾಗಿ ಕಾಣಿಸಿಕೊಂಡು ಉದ್ಯಮದ ಜೊತೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಬೆಳ್ತಂಗಡಿಯ ಹೆಮ್ಮೆಯ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡಾರವರಿಗೆ
“ಬಂಟೆರ್ನ ರತ್ನ ಪ್ರಶಸ್ತಿ ಲಭಿಸಿದೆ.ಶಶಿಧರ್ ಶೆಟ್ಟಿಯವರು ಕಲಾವಿದರ ಕಾಮಧೇನು ಪಟ್ಲ ಪೌಂಡೇಶನ್ ಇದರ ಮಹಾಪೋಷಕರಾಗಿದ್ದು, ಅವರ ಸಮಾಜ ಸೇವಾ ಚಟುವಟಿಕೆಗಳನ್ನು ಗುರುತಿಸಿ  ಅಹಮದಾಬಾದ್ ನ ಬಂಟರ ಸಂಘದಿಂದ  ಈ ಪ್ರಶಸ್ತಿ ಲಭಿಸಿದ್ದು ದಂಪತಿಗಳನ್ನು ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

error: Content is protected !!