ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕ, “ಯಕ್ಷ ಸಂಭ್ರಮಕ್ಕೆ” ಕ್ಷಣಗಣನೆ: ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತಿದೆ, ಗುರುವಾಯನಕೆರೆ:

 

 

 

ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಮೂರನೇ ವರ್ಷದ ಯಕ್ಷ ಸಂಭ್ರಮ ಕಾರ್ಯಕ್ರಮ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನೇತೃತ್ವದಲ್ಲಿ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದ್ದು, ಸಕಲ ತಯಾರಿಗಳು ಅಂತಿಮ ಹಂತದಲ್ಲಿದೆ. ಗುರುವಾಯನಕೆರೆ ಉಡುಪಿ ಹೆದ್ದಾರಿ ಸೇರಿದಂತೆ ಕ್ರೀಡಾಂಗಣದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಯಕ್ಷಾಭಿಮಾನಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ವಾಹನ ಪಾರ್ಕಿಂಗ್, ಸುಸಜ್ಜಿತ ಸಭಾಂಗಣ, ಆಹಾರ ಖಾದ್ಯ ಸವಿಯಲು ವಿಶಾಲ ಕೌಂಟರ್ ಗಳು,ಆಹಾರ ತಯಾರಿಕೆಗೆ ಅಡುಗೆ ಕೋಣೆ, ಶೌಚಾಲಯದ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರ ನಿರ್ವಹಣೆಗಾಗಿ ಸಮಿತಿಗಳನ್ನು ರಚಿಸಲಾಗಿದ್ದು. ವ್ಯವಸ್ಥೆಗಳನ್ನು ಖುದ್ದು ಶಶಿಧರ್ ಶೆಟ್ಟಿ ಅವರು ಪರಿಶೀಲಿಸಿ ಸೂಚನೆಗಳನ್ನು ನೀಡಿದ್ದಾರೆ.ಒಟ್ಟಾರೆಯಾಗಿ ಈ ಬಾರಿಯ ಯಕ್ಷ ಸಂಭ್ರಮ ಕಾರ್ಯಕ್ರಮ ಯಕ್ಷ ಜಾತ್ರೆಯ ರೀತಿಯಲ್ಲಿಅದ್ದೂರಿಯಲ್ಲಿ ನಡೆಯಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಕಲಾ ಪ್ರೇಮಿಗಳು ಆಗಮಿಸಲಿದ್ದಾರೆ.

error: Content is protected !!