ಬೆಳ್ತಂಗಡಿ:ಬಹು ನಿರೀಕ್ಷಿತ ದಸ್ಕತ್ ತುಳು ಚಲನಚಿತ್ರ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಾಘವೇಂದ್ರ ಕುಡ್ವ ನಿರ್ಮಾಣದ ಅನೀಶ್ ಪೂಜಾರಿ ವೇಣೂರು ಇವರ ನಿರ್ದೇಶನದಲ್ಲಿ ಈಗಾಗಲೇ ಸಂಚಲನವನ್ನೇ ಮೂಡಿಸಿರುವ ದಸ್ಕತ್ ತುಳು ಚಿತ್ರ ನಾಳೆ ವಿವಿಧ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.ಬೆಳ್ತಂಗಡಿ ತಾಲೂಕಿನ ಕಲಾವಿದರು ನಟಿಸಿರುವ ಈ ಚಲನಚಿತ್ರ ವೀಕ್ಷಿಸಲು ಕರಾವಳಿಗರು ಕಾತರದಿಂದ ಕಾಯುತಿದ್ದಾರೆ.