“ಯಕ್ಷ ಸಂಭ್ರಮ”ಕ್ಕೆ ಶೃಂಗಾರಗೊಳ್ಳುತ್ತಿದೆ ಗುರುವಾಯನಕೆರೆ:ನವಶಕ್ತಿ ಕ್ರೀಡಾಂಗಣದಲ್ಲಿ ಭರದಿಂದ ಸಾಗುತ್ತಿದೆ ತಯಾರಿ:ಸಹಸ್ರಾರು ಮಂದಿ ಕಲಾಭಿಮಾನಿಗಳು ಸೇರುವ ನಿರೀಕ್ಷೆ: ವಾಹನ ನಿಲುಗಡೆಗಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ

ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನೇತೃತ್ವದಲ್ಲಿ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಡಿ.14 ಶನಿವಾರ ನಡೆಯಲಿರುವ ಪಟ್ಲ ಫೌಂಡೇಶನ್ ನ 3 ನೇ ವರ್ಷದ ವಾರ್ಷಿಕೋತ್ಸವ “ಯಕ್ಷ ಸಂಭ್ರಮ” ಅದ್ದೂರಿಯಾಗಿ ನಡೆಯಲಿದ್ದು,ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಕಳೆದ ಒಂದು ವಾರಗಳಿಂದ ಮೈದಾನವನ್ನು ಸಮತಟ್ಟುಗೊಳಿಸಿ ಪಾರ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಸಿದ್ದಗೊಳ್ಳುತ್ತಿದೆ. ಸಹಸ್ರಾರು ಮಂದಿ ಸೇರುವ ನಿರೀಕ್ಷೆ ಇದ್ದು, ವಿಶಾಲ ವಾಹನ ಪಾರ್ಕಿಂಗ್ ವ್ಯವಸ್ಥೆ . ವಿವಿಧ ಆಹಾರ ಕೌಂಟರ್ ಗಳಲ್ಲಿ ಬಂದಂತಹ ಕಲಾಭಿಮಾನಿಗಳಿಗೆ, ಪ್ರೇಕ್ಷಕರಿಗೆ, ವಿವಿಧ ಬಗೆಯ ಆಹಾರ ಖಾದ್ಯ ಸವಿಯಲು ವ್ಯವಸ್ಥೆ ಮಾಡಲಾಗಿದೆ. ಗುರುವಾಯನಕೆರೆ ಪೇಟೆಯಿಂದ ನವಶಕ್ತಿ ಕ್ರೀಡಾಂಗಣದವರೆಗೆ ವಿದ್ಯುತ್ ದೀಪಾಲಂಕಾರಗೊಳ್ಳುತ್ತಿದೆ.

ಡಿ.14ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಯಕ್ಷಧ್ರುವ ಯಕ್ಷ ಶಿಕ್ಷಣದ 8 ಶಾಲೆಯ ಸುಮಾರು 450 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳ ರಂಗಪ್ರವೇಶದೊಂದಿಗೆ ಯಕ್ಷಗಾನ ನಡೆಯಲಿದೆ. ಸಂಜೆ 5 ರಿಂದ ಮೇಳದ ದೇವರ ಭವ್ಯ ಮೆರವಣಿಗೆ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ವಿವಿಧ ಭಜನಾ ತಂಡಗಳು, ತಾಲೀಮು, ಚೆಂಡೆ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದೆ.

ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಯಕ್ಷ ಸಂಭ್ರಮ ಪ್ರಶಸ್ತಿ, ಹಿರಿಯ ವೈದ್ಯರುಗಳಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಲಿದೆ.

ವಿಶೇಷ ಆಕರ್ಷಣೆ
ವಿವಿದ ಬಗೆಯ ಆಹಾರ ಖಾದ್ಯಗಳನ್ನು ಸವಿದು ಅವುಗಳ ಹೆಸರು ಹೇಳುವವರಿಗೆ ಬಂಗಾರ ಗೆಲ್ಲುವ ಅವಕಾಶ, ಗೌರವಾಧ್ಯಕ್ಷರೊಂದಿಗೆ ವಿಮಾನ ಯಾನ,ಒಷ್ಯನ್ ಪರ್ಲ್ ಹೋಟೇಲ್ ನಲ್ಲಿ ವಿಶೇಷ ಆತಿಥ್ಯ,
ಸೇರಿದಂತೆ ಇನ್ನಿತರ ಬಹುಮಾನ ಗೆಲ್ಲುವ ಅವಕಾಶ ಅದೃಷ್ಟವಂತರಿಗಿದ್ದು ಈ ಬಾರಿಯ ಯಕ್ಷ ಸಂಭ್ರಮದಲ್ಲಿ  ವಿಶೇಷತೆಯಾಗಿರಲಿದೆ.

error: Content is protected !!