ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಹಲವು ಅಂಶಗಳನ್ನು ಬದಲಾಯಿಸಬೇಕು, ಸಂವಿಧಾನವನ್ನೇ ಬದಲಾಯಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಬಗ್ಗೆ ಹೈಕೋರ್ಟ್ನಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಮಾತನಾಡಿ ದೇಶದಲ್ಲಿ ಸಂವಿಧಾನ ಬದಲಾದರೆ ಮೊದಲು ಸಮಸ್ಯೆಗೆ ಸಿಲುಕುವುದೇ ನ್ಯಾಯಾಂಗ ವ್ಯವಸ್ಥೆ ಎಂದು ಎಚ್ಚಸಿದ್ದಾರೆ.
ಸಂವಿಧಾನದಲ್ಲಿರುವ ಹಲವು ಅಂಶಗಳು ಅಪ್ರಸ್ತುತ ಎಂದು ಹೇಳುವ ಮೂಲಕ ಇಡೀ ಸಂವಿಧಾನವನ್ನೇ ಬದಲಾವಣೆ ಮಾಡುವ ಹುನ್ನಾರ ನಡೆಯುತ್ತಿದೆ. ಭಾರತಕ್ಕೆ ಸ್ವಾತಂತ್ರ‍್ಯ ಬಂದ ಬಳಿಕ ಸುಮಾರು ಎರಡು ವರ್ಷಗಳ ಕಾಲ ನೂರಾರು ಮಂದಿ ಶ್ರಮಿಸಿ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಭಾರತದ ಸಂವಿಧಾನವನ್ನು ವಿಶ್ವದ ಎಲ್ಲ ದೇಶಗಳ ನ್ಯಾಯಶಾಸ್ತ್ರಜ್ಞರು ಅತ್ಯಂತ ಪ್ರಸ್ತುತವಾದ ಸಂವಿಧಾನವೆAದು ಹೇಳುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಸಂವಿಧಾನದ ಹಲವು ಪರಿಚ್ಛೇದಗಳು ಅಪ್ರಸ್ತುತವೆಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಬೇಕು ಎಂಬ ಕೂಗೂ ಬರುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸಂವಿಧಾನ ಬದಲಾದರೆ, ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳುತ್ತಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಂಗ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಹಿಂದೆ ಸರಿದಲ್ಲಿ ಅಪವ್ಯಾಖ್ಯಾನ ಪ್ರಾರಂಭವಾಗಲಿದ್ದು, ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಆದ್ದರಿಂದ ತೊಂದರೆಗೆ ಸಿಲುಕುವುದು ಮೊದಲು ನ್ಯಾಯಾಂಗ ವ್ಯವಸ್ಥೆ. ಆಗ ಎಲ್ಲ ನ್ಯಾಯಾಧೀಶರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದ ಸಂವಿಧಾನ ಉಳಿಸುವ ಕಾರ್ಯ ನ್ಯಾಯಾಂಗಕ್ಕೆ ಸೇರಿದೆ. ಕೇಶವ ಭಾರತಿ ಪ್ರಕರಣದಿಂದಾಗಿ ಇಂದಿಗೂ ಸಂವಿಧಾನದ ಮೂಲ ತತ್ವಗಳು ಉಳಿದುಕೊಂಡಿವೆ. ಹೀಗಾಗಿ ಪ್ರತಿಯೊಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಬೇಕಾಗಿದೆ ಎಂದು ಅವರು ತಿಳಿಸಿದರು.