ಅಸುರಕ್ಷಿತ ಫುಡ್ ಪದಾರ್ಥಗಳ ಪತ್ತೆ, ಕ್ರಮಕ್ಕೆ ಮುಂದಾದ ಇಲಾಖೆ:ಸಿಹಿತಿಂಡಿಗಳಿಗೆ ಕೃತಕ ಬಣ್ಣದ ಲೇಪನ ಪತ್ತೆ: ರಾಜ್ಯಾದ್ಯಂತ 154 ಮಾದರಿ ಬೆಳ್ಳುಳ್ಳಿಗಳು ಪರೀಕ್ಷೆಗೆ..!

ಬೆಂಗಳೂರು : ರಾಜ್ಯಾದ್ಯಂತ 154 ಮಾದರಿ ಬೆಳ್ಳುಳ್ಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚೀನಾದಿಂದ ಸರಬರಾಜು ಆಗುತ್ತಿರುವ ನಿಷೇಧಿತ ಬೆಳ್ಳುಳ್ಳಿ ರಾಜ್ಯದಲ್ಲಿ ಮಾರಾಟಗುತ್ತಿದೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

154ಮಾದರಿಯಲ್ಲಿ 147 ಮಾದರಿ ಸುರಕ್ಷಿತವಾಗಿದ್ದು, 5 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡುತ್ತಿದ್ದು, ಅದರಂತೆ ದೀಪಾವಳಿ ಪ್ರಯುಕ್ತ ಮಾರಾಟ ಮಾಡುತ್ತಿದ್ದ 151 ಮಾದರಿಯ ಸಿಹಿತಿಂಡಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 143 ಮಾದರಿಯ ಸಿಹಿತಿಂಡಿಗಳು ಒಳ್ಳೆಯ ಗುಣಮಟ್ಟ ಹೊಂದಿದ್ದರೆ, 9 ಮಾದರಿಯ ಸಿಹಿತಿಂಡಿಗಳಿಗೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಹಿಂದುಳಿದ ವರ್ಗದ ಹಾಸ್ಟೆಲ್ ಗಳಿಂದ 1201 ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 65 ಆಹಾರಗಳು ಸುರಕ್ಷಿತವಾಗಿವೆ ಎಂದು ವರದಿ ನೀಡಿದೆ.

error: Content is protected !!